ಬೆಂಗಳೂರು: ಆಗಸ್ಟ್ 15, 2022ರಂದು ಸ್ವಾತಂತ್ರ್ಯ ದಿನಾಚರಣೆಯಂದು ( Independence Day 2022 ) ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 15ನೇ ಆಗಸ್ಟ್ 2022ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ನಗರ ಹೊರತುಪಡಿಸಿ, ಈ ಕೆಳಗೆ ಸೂಚಿಸಿದಂತೆ ಸಚಿವರುಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೀಗಿದೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲಿರುವಂತ ಸಚಿವರ ಪಟ್ಟಿ
- ಗೋವಿಂದ ಎಂ ಕಾರಜೋಳ – ಬೆಳಗಾವಿ
- ಬಿ ಶ್ರೀರಾಮುಲು – ಬಳ್ಳಾರಿ
- ವಿ ಸೋಮಣ್ಣ – ಚಾಮರಾಜನಗರ
- ಉಮೇಶ್ ಕತ್ತಿ – ವಿಜಯಪುರ
- ಎಸ್ ಅಂಗಾರ – ಉಡುಪಿ
- ಅರಗ ಜ್ಞಾನೇಂದ್ರ – ತುಮಕೂರು
- ಡಾ.ಸಿಎನ್ ಅಶ್ವತ್ಥನಾರಾಯಣ – ರಾಮನಗರ
- ಸಿಸಿ ಪಾಟೀಲ್ – ಬಾಗಲಕೋಟೆ
- ಆನಂದ್ ಸಿಂಗ್ – ಕೊಪ್ಪಳ
- ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
- ಪ್ರಭು ಚೌಹಾಣ್ – ಯಾದಗಿರಿ
- ಮುರುಗೇಶ್ ನಿರಾಣಿ – ಕಲಬುರ್ಗಿ
- ಶಿವರಾಮ್ ಹೆಬ್ಬಾರ್ – ಹಾವೇರಿ
- ಎಸ್ ಟಿ ಸೋಮಶೇಖರ್ – ಮೈಸೂರು
- ಬಿ.ಸಿ ಪಾಟೀಲ್ – ಚಿತ್ರದುರ್ಗ
- ಭೈರತಿ ಬಸವರಾಜ – ದಾವಣಗೆರೆ
- ಡಾ.ಕೆ ಸುಧಾಕರ್ – ಬೆಂಗಳೂರು ಗ್ರಾಮಾಂತರ
- ಕೆ.ಗೋಪಾಲಯ್ಯ – ಹಾಸನ
- ಶಶಿಕಲಾ ಜೊಲ್ಲೆ – ವಿಜಯನಗರ
- ಎಂ ಟಿ ಬಿ ನಾಗರಾಜ್ – ಚಿಕ್ಕಬಳ್ಳಾಪುರ
- ಡಾ.ನಾರಾಯಣಗೌಡ – ಶಿವಮೊಗ್ಗ
- ಬಿ.ಸಿ ನಾಗೇಶ್ – ಕೊಡಗು
- ವಿ ಸುನೀಲ್ ಕುಮಾರ್ – ದಕ್ಷಿಣ ಕನ್ನಡ
- ಹಾಲಪ್ಪ ಆಚಾರ್ – ಧಾರವಾಡ
- ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು
- ಮುನಿರತ್ನ – ಕೋಲಾರ
- ಗದಗ – ಜಿಲ್ಲಾಧಿಕಾರಿಗಳು
- ಮಂಡ್ಯ – ಜಿಲ್ಲಾಧಿಕಾರಿಗಳು
- ಬೀದರ್ – ಜಿಲ್ಲಾಧಿಕಾರಿಗಳು
- ಚಿಕ್ಕಮಗಳೂರು – ಜಿಲ್ಲಾಧಿಕಾರಿಗಳು
ವರದಿ : ವಸಂತ ಬಿ ಈಶ್ವರಗೆರೆ