ಕೊಲೋಂಬೋ: ಶ್ರೀಲಂಕಾದ ಹೊಸ ಅಧ್ಯಕ್ಷರು ಹಿರಿಯ ಶಾಸಕ ದಿನೇಶ್ ಗುಣವರ್ದನಾ ಅವರನ್ನು ಅರ್ಥಿಕ ಬಿಕ್ಕಟ್ಟಿನ ಪೀಡಿತ ದೇಶದ ಮುಂದಿನ ಪ್ರಧಾನಿಯಾಗಿ ನೇಮಿಸಲಿದ್ದಾರೆ ಎಂದು ನಾಲ್ಕು ರಾಜಕೀಯ ಮೂಲಗಳು ಗುರುವಾರ ತಿಳಿಸಿವೆ.
ಹೌದು, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಶಾಲಾ ಸಹಪಾಠಿ ಮತ್ತು ಮಾಜಿ ಸಾರ್ವಜನಿಕ ಆಡಳಿತ ಸಚಿವ ದಿನೇಶ್ ಗುಣವರ್ಧನಾ ಅವರನ್ನು ಸರ್ಕಾರದಲ್ಲಿ ಪ್ರಧಾನಿಯಾಗಿ ನೇಮಿಸಲಾಗುವುದು ಎಂದು ಖಾಸಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಈ ನಡುವೆ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ಅತ್ಯುನ್ನತ ಕಚೇರಿಗೆ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಶುಕ್ರವಾರ ತಮ್ಮ ಹೊಸ ಕ್ಯಾಬಿನೆಟ್ ಅನ್ನು ನೇಮಿಸಲಿದ್ದಾರೆ ಎನ್ನಲಾಗಿದೆ.