ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬ ಯುವತಿ ಅಥವಾ ಮಹಿಳೆ ತನ್ನ ಚರ್ಮದ ಕಾಂತಿಯ ಬಗ್ಗೆ ಹೆಚ್ಚ ಕಾಳಜಿ ವಹಿಸುತ್ತಾರೆ. ಆದರೆ ಕೆಲಸದ ಒತ್ತಡದಿಂದಾಗಿ ಸರಿಯಾಗಿ ನಿರ್ವಹಿಸವುದಿಲ್ಲ. ಇದರಿಂದ ಚರ್ಮವು ಶುಷ್ಕ, ನಿರ್ಜೀವ ಮತ್ತು ಕಲೆಯುಕ್ತವಾಗುತ್ತದೆ.
NITI ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ, ಮಣಿಪುರ, ಚಂಡೀಗಢಗೆ ಅಗ್ರಸ್ಥಾನ
ತ್ವಚೆಗೆ ವಾರಕ್ಕೊಮ್ಮೆಯಾದರೂ ಅಗತ್ಯ ಆರೈಕೆ ನೀಡಬೇಕು. ಇದರಿಂದ ಮುಖವು ಮೃದು ಮತ್ತು ಹೊಳೆಯುವಂತಾಗುತ್ತದೆ. ಇದಕ್ಕೆ ಮೊಸರು ಪ್ರಯೋಜನಕಾರಿಯಾಗಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಮೊಸರು ತ್ವಚೆಗೆ ಹೊಳಪನ್ನು ನೀಡುವ ಅಗತ್ಯ ವಿಟಮಿನ್ಗಳು ಮತ್ತು ಖನಿಜಗಳನ್ನು ಹೊಂದಿದೆ. ಮೊಸರು ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಡಿ ಮತ್ತು ವಿಟಮಿನ್ ಎ ಯ ಅತ್ಯುತ್ತಮ ಮೂಲವಾಗಿದೆ.
ಮೊಸರು ಮುಖವನ್ನು ಮೊಡವೆ, ಕಲೆಗಳಿಂದ ರಕ್ಷಿಸಲು ಮತ್ತು ಮುಖದ ಮೇಲೆ ಶಾಶ್ವತ ಹೊಳಪನ್ನು ತರಲು ಸಹಾಯ ಮಾಡುತ್ತದೆ. ಹಾಗಾದರೆ ಮೊಸರನ್ನು ಯಾವ ರೀತಿಯಾಗಿ ಬಸಳಬೇಕು ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ.
ಮೊಸರು ಮತ್ತು ನಿಂಬೆ ಬಳಕೆ
ಮುಖದ ಕಪ್ಪನ್ನು ಹೋಗಲಾಡಿಸಲು ಮತ್ತು ಕಾಂತಿ ಪಡೆಯಲು ನಿಂಬೆಯನ್ನು ಮೊಸರಿನ ಜೊತೆ ಬಳಸಬಹುದು. ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ ಸುಮಾರು 10 ನಿಮಿಷಗಳ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಮೊಸರು ಮತ್ತು ಅರಿಶಿಣ
ಮೊಡವೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಇದನ್ನು ನಿಯಂತ್ರಿಸಲು ಮುಖಕ್ಕೆ ಮೊಸರು ಮತ್ತ ಅರಿಶಿಣದ ಪ್ಯಾಕ್ ಅನ್ನು ಅನ್ವಹಿಸಬಹುದು. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಮೊಡವೆಗಳನ್ನು ತೆಗೆದುಹಾಕುತ್ತದೆ. ಅರ್ಧ ಚಮಚ ಅರಿಶಿಣವನ್ನು 2 ಚಮಚ ಮೊಸರಿಗೆ ಬೆರೆಸಿ ಪೇಸ್ಟ್ ಮಾಡಿ ಅದನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಬೇಕು. ಬಳಿಕ 15 ನಿಮಿಷಗಳ ಕಾಲ ಒಣಗಲು ಬಿಟ್ಟು ಲಘುವಾಗಿ ಮಸಾಜ್ ಮಾಡಿ ನಂತರ ನೀರಿನಿಂದ ತೊಳೆಯಬೇಕು.
ಕಡೆಲೆ ಹಿಟ್ಟು ಮತ್ತು ಮೊಸರಿನ ಸ್ಕ್ರಬ್
ಚರ್ಮಕ್ಕೆ ಹಾನಿಯಾಗದಂತೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಈ ಪ್ಯಾಕ್ ಸಹಾಯಕ. ಕಡೆಲೆಹಿಟ್ಟು ಮತ್ತು ಮೊಸರಿನ ಸ್ಕ್ರಬ್ ಅನ್ನು ಅನ್ವಯಿಸಬಹುದು. ಇದಕ್ಕಾಗಿ, 1 ಚಮಚ ಕಡೆಲೆಹಿಟ್ಟು ಮತ್ತು 2 ಚಮಚ ಮೊಸರು ಬೆರೆಸಿ ದಪ್ಪ ಪೇಸ್ಟ್ ಮಾಡಬೇಕು. ಇದನ್ನು ಮುಖದ ಮೇಲೆ ಹಚ್ಚಿ ಮತ್ತು ಒಣಗಿದ ನಂತರ ಲಘುವಾದ ಕೈಯಿಂದ ಉಜ್ಜಿ ಮುಖವನ್ನು ಸ್ವಚ್ಛಗೊಳಿಸಬೇಕು. ಹೀಗೆ ವಾರದಲ್ಲಿ ಒಮ್ಮೆಯಾದರೂ ಮಾಡಿದರೆ ಉತ್ತಮ ರಿಸಲ್ಟ್ ಕಾಣಬಹುದು.