ಕೆಎನ್ಎನ್ ಡಿಜಿಟಲ್ ಡೆಸ್ಕ್ : ತಂದೆ-ತಾಯಿ ತಮ್ಮ ಸರ್ವಸ್ವವನ್ನು ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡಿ ಬೆಳೆಸಿ ಪೋಷಿಸುತ್ತಾರೆ. ಆದರೆ ಅವರೀಗಾಗಿ ನಾವು ಏನನ್ನು ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಪುತ್ರ ವೃದ್ಧ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಯಾತ್ರೆಗೆ ಕರೆದೊಯ್ಯುತ್ತಿರುವ ಘಟನೆ ನಡೆದಿದೆ.
ಈ ಕುರಿತಂತೆ ಸಾಮಾಜಿಕ ಜಾತಲಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಒಬ್ಬ ವ್ಯಕ್ತಿ ತನ್ನ ವಯಸ್ಸಾದ ಪೋಷಕರನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಇದನ್ನು ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಹಂಚಿಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
जहां आजकल बूढ़े मां-बाप का तिरस्कार होता है, उन्हें घर से निकाल दिया जाता है या अपने साथ रहने नहीं दिया जाता.. वहीं आज इसका विपरीत दृश्य देखने को मिला..
लाखों शिवभक्तों के बीच एक श्रवण कुमार भी है जो पालकी में अपने बुज़ुर्ग माता-पिता को लेकर कांवड़ यात्रा पर आया है..
मेरा नमन! pic.twitter.com/phG1h3pfg1
— Ashok Kumar IPS (@AshokKumar_IPS) July 19, 2022
ಇತ್ತೀಚಿನ ದಿನಗಳಲ್ಲಿ ಮುದುಕ ತಂದೆ -ತಾಯಿಯರನ್ನು ತಿರಸ್ಕಾರ ಮಾಡುತ್ತಾರೆ. ಮನೆಯಿಂದ ಹೊರ ಹಾಕುತ್ತಾರೆ ಅಥವಾ ಮಕ್ಕಳೊಂದಿಗೆ ಇರಲು ಬಿಡುವುದಿಲ್ಲ. ಆದರೆ, ಇಂದು ಇದಕ್ಕೆ ವಿರುದ್ಧವಾದ ನೋಟ ಕಂಡುಬಂದಿದೆ. ಕನ್ವರ್ ಯಾತ್ರೆಗೆ ಬಂದಿರುವ ಲಕ್ಷ ಲಕ್ಷ ಶಿವಭಕ್ತರಲ್ಲಿ ಶ್ರವಣಕುಮಾರನಿದ್ದಾನೆ. ಅವನ ವಯಸ್ಸಾದ ಹೆತ್ತವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬಂದಿದ್ದಾರೆ. ಅವನಿಗೆ ನನ್ನ ಗೌರವಗಳು ಎಂದು ಅಧಿಕಾರಿ ಶೀರ್ಷಿಕೆ ನೀಡಿದ್ದಾರೆ.
ವಿಡಿಯೋ ವೀಕ್ಷಿಸಿದ ನೆಟ್ಟಿಗರು ವ್ಯಕ್ತಿಯ ಕೆಲಸಕ್ಕೆ ಶ್ಲಾಘನೆ ಸೂಚಿಸಿದ್ದು, ಸೆಲ್ಯೂಟ್ ಹೊಡೆದಿದ್ದಾರೆ.