ಮಂಡ್ಯ: ಎರಡುಬಾರಿ ಕೆ.ಆರ್.ಪೇಟೆಗೆ ಬಂದಿದ್ದೇನೆ, ಸಿಎಂ ಆದ ಬಳಿಕ ಇದು ಮೊದಲ ಭೇಟಿ ಮಾಡುತ್ತಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಇಲ್ಲಿಯ ಹೇಮಗಿರಿ, ಮಂದಗಿರಿ ನಾಲೆ ಆಧುನೀಕರಣ ಮಾಡಿದ್ದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿಗಮ ಮಂಡಳಿ ವಿಚಾರವಾಗಿ ಮಾತನಾಡಿದ ಅವರು, ಶೀಘ್ರದಲ್ಲೇ ದೆಹಲಿ ಭೇಟಿ ನೀಡಲಿದ್ದೇನೆ. ದೆಹಲಿ ಭೇಟಿ ನಂತರ ನಿಗಮ ಮಂಡಳಿ ನೇಮಕ ಮಾಡಲಾಗಿದೆ.
ಈಶ್ವರಪ್ಪ ಮತ್ತೆ ಸಂಪುಟ ಸೇರ್ಪಡೆ ವಿಚಾರವಾಗಿ ಪ್ರಕರಣ ಫೈನಲ್ ಆಗಲಿ ನೋಡೋಣ ಎಂದಿದ್ದಾರೆ.
ಒಕ್ಕಲಿಗ ಸಿಎಂ ಚರ್ಚೆ ಕುರಿತು, ಈಗಾಗಲೇ ಆ ಕುರಿತು ಮಾತನಾಡಿದ್ದೇನೆ.ಮತ್ತೆ ಮತ್ತೆ ಅದರ ಬಗ್ಗೆ ಮಾತನಾಡುವುದು ಬೇಡ. ಅದು ಅವರ ಪಕ್ಷದ ಆಂತರಿಕ ವಿಚಾರ.
ಮುಖ್ಯಮಂತ್ರಿ ಆಗುವುದು ಜನ ತೀರ್ಮಾನ ಮಾಡ್ತಾರೆ. ಅವರವರೇ ತೀರ್ಮಾನ ಮಾಡುವುದಿಲ್ಲ. ಸಿಎಂ ಕುರ್ಚಿಗಾಗಿ ಅವರಿಬ್ಬರ ಪೈಪೋಟಿ ಜಗಜ್ಜಾಹೀರ. ಅದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಮೊದಲನಿಂದಲೂ ಸಿಎಂ ಆಗಲು ಅವಕಾಶ ಕೊಡಿ ಅಂತಿದ್ದಾರೆ. ಈಗ ಡಿಕೆ ಶಿವಕುಮಾರ್ ಈ ಬಾರಿ ನನಗೆ ಅವಕಾಶ ನೀಡಿ ಅಂತಿದ್ದಾರೆ. ಮತ್ತೊಬ್ಬರು ಇನ್ನೊಮ್ಮೆ ಸಿಎಂ ಆಗಲು ಅವಕಾಶ ಕೊಡಿ ಅಂತಿದ್ದಾರೆ. ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ, ಅವರೇ ತೀರ್ಮಾನ ಮಾಡ್ತಾರೆ. ಅದಕ್ಕೂ ಮುನ್ನ ಈ ರೀತಿಯ ಪೈಪೋಟಿಯನ್ನ ಎಲ್ಲರೂ ಗಮನಿಸುತ್ತಿದ್ದಾರೆ. ಕ್ಯಾಬಿನೆಟ್ ಫೈನಲ್ ಕುರಿತು ದೆಹಲಿಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.