ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಶಾಲಾ ವಾಹನಗಳಿಂದ ಸಂಚಾರ ದಟ್ಟಣೆ ಆಗಿದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಶುರುವಾಗಿದೆ.ಶಾಲಾ ವಾಹನ ಸೇರಿದಂತೆ ಮಕ್ಕಳನ್ನು ಬಿಡಲು ಬರುವ ಪೋಷಕರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ.
BREAKING NEWS: ನವ್ಯಾಶ್ರೀ ವಿರುದ್ಧ FIR: ವಿಚಾರಣೆಗೆ ಹಾಜರಾಗಲು APMC ಪೊಲೀಸರಿಂದ ನೋಟಿಸ್ ಜಾರಿ..!
ಮುಖ್ಯರಸ್ತೆಗಳಲ್ಲಿಯೇ ವಾಹನ ಪಾರ್ಕ್ ಮಾಡೋದರಿಂದ ಬೇರೆವರಿಗೆ ತೊಂದರೆ ಆಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಶಾಲಾ ಕಾಲೇಜುಗಳು ಮಾರ್ಗಸೂಚಿ ಫಾಲೊ ಮಾಡುವಂತೆ ನೋಟಿಸ್ ಜಾರಿಮಾಡಿದ್ದಾರೆ.ಎಲ್ಲಾ ಶಾಲೆಗಳಿಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲೆಗಳೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಸೆಕ್ಯೂರಿಟಿ ಗಾರ್ಡ್ ಗಳನ್ನೇ ಟ್ರಾಫಿಕ್ ಕಂಟ್ರೋಲ್ ಮಾಡಲು ನೇಮಿಸಬೇಕು. ಅದರ ತರಬೇತಿ ನೀಡಲು ಟ್ರಾಫಿಕ್ ಪೊಲೀಸರು ಸಿದ್ದರಿದ್ದಾರೆ.
BREAKING NEWS: ನವ್ಯಾಶ್ರೀ ವಿರುದ್ಧ FIR: ವಿಚಾರಣೆಗೆ ಹಾಜರಾಗಲು APMC ಪೊಲೀಸರಿಂದ ನೋಟಿಸ್ ಜಾರಿ..!
ಅದಕ್ಕೆ ಬೇಕಾಗುವ ತರಬೇತಿಯನ್ನೂ ನೀಡುತ್ತಾರೆ. ಸೆಕ್ಯೂರಿಟಿ ಗಾರ್ಡ್ ಗಳಿಗೆ ಟ್ರಾಫಿಕ್ ಕಂಟ್ರೋಲ್ ತರಬೇತಿ ನೀಡಲಾಗಿದೆ.
ಎಲ್ಲಾ ಶಾಲೆಗಳು ಈ ನಿಯಮಗಳನ್ನು ಪಾಲಿಸಲೇಬೇಕು. ಶಾಲಾ ವಾಹನಗಳನ್ನು ಆಯಾ ಶಾಲೆಯ ಪಾರ್ಕಿಂಗ್ ಜಾಗದಲ್ಲೇ ಪಾರ್ಕ್ ಮಾಡಬೇಕು.ರಸ್ತೆಯಲ್ಲಿ ನಿಲ್ಲಿಸಿದ್ರೆ ಸೀಜ್ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.