ಕೆಎನ್ ಎನ್ ನ್ಯೂಸ್ ಡೆಸ್ಕ್ : ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಎದೆ ಉರಿ ಉಂಟಾಗುತ್ತದೆ. ಎದೆ ಉರಿ ಕಾಣಿಸಿದರೆ ಹೊಟ್ಟೆ ಮತ್ತು ಎದೆ ಭಾಗದಲ್ಲಿ ಉರಿ ಕಂಡು ಬರುವುದು. ಲಕ್ಷಾಂತರ ಮಂದಿಗೆ ಈ ಸಮಸ್ಯೆ ಇದೆ. ಈ ಸಮಸ್ಯೆ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.
ಇಂದಿನ ದಿನದಲ್ಲಿ ಜೀವನ ಶೈಲಿ, ಒತ್ತಡಗಳು , ಟೈಂಗೆ ಸರಿಯಾಗಿ ಊಟ , ತಿಂಡಿ ಮಾಡದೆ ಇದ್ದಾರ ಇಂತಹ ಸಮಸ್ಯೆ ಕಂಡು ಬರುತ್ತದೆ.ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ನಮ್ಮಲ್ಲಿ ಅನೇಕರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳು. ಗ್ಯಾಸ್ಟ್ರಿಕ್ ಗ್ರಂಥಿಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಗತ್ಯಕ್ಕಿಂತ ಹೆಚ್ಚು ಆಮ್ಲವನ್ನು ಉತ್ಪಾದಿಸಿದಾಗ ಇದು ಸಂಭವಿಸುತ್ತದೆ. ಹೀಗಿದ್ದಾಗ ನಾವು ಏನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕು. ಜೊತೆಗೆ ನಮ್ಮ ಆಹಾರ ಪದ್ದತಿ ಸಹ ಹೇಗಿರಬೇಕು ಎಂದು ತಜ್ಞರು ಹೇಳುತ್ತಾರೆ.
ಊಟ ಕಡಿಮೆ ಮಾಡಿ: ಪ್ರತಿದಿನ ಏನಾದ್ರೂ ತಿನ್ನತ್ತ ಇರುತ್ತೇವೆ. ಜಾಸ್ತಿ ತಿನ್ನವು ಬದಲು ಸ್ವಲ್ಪ ಆಹಾರ ಸೇವಿಸಬೇಕು. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
ಚಾಕೊಲೇಟ್ ಅತೀಯಾಗಿ ಸೇವಿಸಬೇಡಿ: ಅನ್ನನಾಳದ ಸ್ಪಿಂಕ್ಟರ್ ಅನ್ನು ಕಡಿಮೆ ಮಾಡುತ್ತದೆ ಅಲ್ಲದೆ ಅನ್ನನಾಳದಿಂದ ವಸ್ತುಗಳನ್ನು ಹಿಮ್ಮುಕವಾಗಿ ಚಲಿಸುವಂತೆ ಮಾಡುತ್ತದೆʼ
ಕರಿದ ತಿಂಡಿಗಳನ್ನು ಬಿಟ್ಟುಬಿಡಿ: ಬಿಸಿ ಮಸಾಲೆ ಪದಾರ್ಥಗಳು, ಈರುಳ್ಳಿ ಮತ್ತು ಟೊಮೆಟೊ ಸೇವನೆಯನ್ನೂ ಕಡಿಮೆ ಮಾಡಬೇಕು.
ತೂಕ ಇಳಿಸಿ: ನೀವು ಅಧಿಕ ತೂಕ ಇದ್ದರೂ ಎದೆ ಉರಿಯಂತಹ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ ನೀವು ದಪ್ಪ ಇದ್ದರೆ ತೂಕ ಇಳಿಸುವ ಬಗ್ಗೆ ಹೆಚ್ಚು ಗಮನಹರಿಸಬೇಕು.
ಊಟವಾದ ಕೂಡಲೇ ಮಲಗಬೇಡಿ: ಕೆಲವರು ಊಟ ಮಾಡಿದ ಕೂಡಲೇ ಸ್ವಲ್ಪವೂ ಸಮಯ ನೀಡದೆ ಮಲಗುತ್ತಾರೆ. ಆದರೆ ಇದು ತಪ್ಪು. ಮಲಗಲು ಕನಿಷ್ಠ ಒಂದು ಗಂಟೆ ಮುನ್ನ ಊಟ ಮಾಡಿ. ಊಟ ಆದ ಕೂಡಲೇ 15 ನಿಮಿಷವಾದರೂ ಅತ್ತಿಂದಿತ್ತ ಅಡ್ಡಾಡಿ. ಇದರಿಂದ ಎದೆ ಉರಿ ಕಡಿಮೆಯಾಗುತ್ತದೆ.