ಹೊಸಕೋಟೆ : ನಡವಟ್ಟಿ ಗ್ರಾಮದ ಕೌಟುಂಬಿಕ ಕಲಹದಿಂದ ಪತ್ನಿ ಹತ್ಯೆಗೆ ನಡೆಸಲು ಹೋಗಿ ಯಡವಟ್ಟು ಮಾಡಿಕೊಂಡು ಪತ್ನಿ ಬದಲು ಅತ್ತೆಯನ್ನೆ ದೊಣ್ಣೆಯಿಂದ ಹೊಡೆದು ಕೊಂದ ಅಳಿಯ ಎಂಬ ಘಟನೆ ಬೆಳಕಿಗೆ ಬಂದಿದೆ.
ನಡವಟ್ಟಿ ಗ್ರಾಮದನಿವಾಸಿ ನಾಗರಾಜು(35 ಬಂಧಿತ ಆರೋಪಿ, ಸೌಭ್ಯಾಗ್ಯ(45) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈತ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಹತ್ಯೆ ಮಾಡಲು ಹೋಗಿ ತನ್ನ ಅತ್ತೆಯನ್ನೇ ಕೊಂದ ಘಟನೆ ಬೆಳಕಿಗೆ ಬಂದಿದೆ. ಜು.13ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಬ್ ಚಾಲಕನಾಗಿದ್ದ ನಾಗರಾಜು ಎಂದು ತಿಳಿದುಬಂದಿದೆ. ಈತನಿಗೆ 5ವರ್ಷದ ಮಗಳು ಇದ್ದಾಳೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.