ಅಮೆರಿಕ: ಯುನೈಟೆಡ್ ಸ್ಟೇಟ್ಸ್ನಲ್ಲಿ 25 ವರ್ಷದ ಪಿಜ್ಜಾ ಡೆಲಿವರಿ ಬಾಯ್ ಇತ್ತೀಚೆಗೆ ಇಂಡಿಯಾನಾದಲ್ಲಿ ಉರಿಯುತ್ತಿರುವ ಮನೆಯಿಂದ ತನ್ನ ಪ್ರಾಣವನ್ನೇ ಪಣಕ್ಕಿಟ್ಟು
ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ.
ಲಾಫಯೆಟ್ಟೆ ಪೊಲೀಸ್ ಇಲಾಖೆಯು ಪೋಸ್ಟ್ ಮಾಡಿದ್ದು, ನಿಕೋಲಸ್ ಬೋಸ್ಟಿಕ್ ಎಮಬ ವ್ಯಕ್ತಿ ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ತಕ್ಷಣವೇ ಮನೆಯೊಳಗೆ ನುಗ್ಗಿ ಅಲ್ಲಿದ್ದ ಐವರನ್ನು ರಕ್ಷಿಸಿದ್ದಾನೆ ಎಂದು ತಿಳಿಸಿದ್ದಾರೆ.
Here’s the video to go along with the story. pic.twitter.com/TvZ5wzCg1f
— LafayetteINPolice (@LafayetteINPD) July 15, 2022
ಜುಲೈ 11 ರಂದು ಇಂಡಿಯಾನಾದ ಲಫಯೆಟ್ಟೆಯಲ್ಲಿ ಈ ಘಟನೆ ನಡೆದಿದೆ. ನಿಕೋಲಸ್ ಬೋಸ್ಟಿಕ್ ಅವರು ಐವರ ಜೀವಗಳನ್ನು ಉಳಿಸಿದ್ದಾರೆ. ಈ ಘಟನೆಯ ಸಮಯದಲ್ಲಿ ಅವರ ನಿಸ್ವಾರ್ಥತೆಯು ಸ್ಪೂರ್ತಿದಾಯಕವಾಗಿದೆ. ಅವರು ತಮ್ಮ ಧೈರ್ಯ ಮತ್ತು ದೃಢವಾದ ಶಾಂತತೆಯಿಂದ ಅನೇಕರನ್ನು ಪ್ರಭಾವಿಸಿದ್ದಾರೆ ಎಂದು ಲಫಯೆಟ್ಟೆ ಪೊಲೀಸ್ ಇಲಾಖೆ ಶ್ಲಾಘಿಸಿದೆ.
ಉತ್ತರಾಖಂಡ ಪ್ರವಾಹದಲ್ಲಿ ಕೊಚ್ಚಿಹೋದ ಶಾಲಾ ಬಸ್… ಮುಂದೇನಾಯ್ತು ಇಲ್ಲಿ ನೋಡಿ!
BIGG BREAKING NEWS: ದಕ್ಷಿಣ ಈಜಿಪ್ಟ್ ನಲ್ಲಿ ಭೀಕರ ರಸ್ತೆ ಅಪಘಾತ: ಕಾರು ಡಿಕ್ಕಿ, 22 ಜನರ ದುರ್ಮರಣ