ನವದೆಹಲಿ : ಗೋಏರ್ನ ಎರಡು ವಿಮಾನಗಳ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ದೆಹಲಿಗೆ ವಾಪಸ್ ಆಗಿವೆ.
ಅಂದ್ಹಾಗೆ, ವಿಟಿ-ಡಬ್ಲ್ಯುಜಿಎ ಜಿ8-386 ವಿಮಾನವು ಮುಂಬೈನಿಂದ ಲೇಹ್ʼಗೆ ಹೊರಟಿತ್ತು. ಮತ್ತೊಂದು ಗೋಏರ್ ವಿಮಾನ ವಿಟಿ-ಡಬ್ಲ್ಯೂಜಿ ಜಿ8-6202, ಶ್ರೀನಗರದಿಂದ ದೆಹಲಿಗೆ ಹೊರಟಿತ್ತು. ಆದ್ರೆ, ಇವುಗಳ ಎಂಜಿನ್ ಮಿತಿ ಮೀರಿದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು ಎಂದು ಡಿಜಿಸಿಎ ಈ ಮಾಹಿತಿಯನ್ನು ನೀಡಿದೆ.