ಬಳ್ಳಾರಿ : ಹಂಪಿ ಎಕ್ಸ್ ಪ್ರೆಸ್ ರೈಲಿನ ಗಾಲಿಗಳಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ನಡೆದಿದೆ.
ತಾಂತ್ರಿಕ ದೋಷದ ಹಿನ್ನಲೆ ಹಂಪಿ ಎಕ್ಸ್ಪ್ರೆಸ್ ರೈಲಿನ ಗಾಲಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ರೈಲಿನ ಎಂಜಿನ್ ಸ್ಟಾರ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಹಿಂದಿನ ಗಾಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ರೈಲ್ವೆ ಸಿಬ್ಬಂದಿ ದೋಷವನ್ನು ಸರಿಪಡಿಸಿದ ನಂತರ ರೈಲು ಸಂಚಾರ ಆರಂಭಿಸಲಾಗಿದೆ. ರೈಲುಗಳ ಗಾಲಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಹುಬ್ಬಳ್ಳಿಯಿಂದ ಮೈಸೂರಿಗೆ ತೆರಳುತ್ತಿದ್ದ ಹಂಪಿ ಎಕ್ಸಪ್ರೇಸ್ ರೈಲು 2 ಗಂಟೆ ತಡವಾಗಿ ನಿರ್ಗಮಿಸಿದೆ.
Good News : ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ನಂದಿನಿ ಉತ್ಪನ್ನ’ಗಳ ದರ ಇಳಿಕೆ | Nandini Product Price