ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತೀಯ ತಿನಿಸುಗಳಿಗೆ ಎಲ್ಲರೂ ಮನಸೋಲುವುದು ಖಚಿತ. ವಿದೇಶಗಳಲ್ಲೂ ಸಹ ಇಲ್ಲಿನ ತಿನಿಸುಗಳನ್ನು ಸವಿಯಲು ಜನ ಹಿಂದೆಮುಂದೆ ನೋಡಲ್ಲ. ಆದ್ರೆ, ವಿವಿಧ ಭಕ್ಷ್ಯಗಳ ಬೆಲೆ ಎಲ್ಲಿಗೂ ಇಲ್ಲಿಗೂ ಅಜಗಜಾಂತರ. ನೀವು ವಿದೇಶಕ್ಕೆ ಹೋಗಿ ಭಾರತೀಯ ಭಕ್ಷ್ಯಗಳನ್ನು ಆರ್ಡರ್ ಮಾಡಿದ್ರೆ, ನೀವು ಮೂರ್ಚೆ ಹೋಗೋದು ಗ್ಯಾರಂಟಿ. ಇದಕ್ಕೆ ಕಾರಣ ಅವುಗಳ ಬೆಲೆ…
ಹೌದು, ಕೆಲವೊಂದು ರೆಸ್ಟೊರೆಂಟ್ಗಳಲ್ಲಿ ತಿನ್ನುವ ಆಹಾರಗಳ ಬೆಲೆ ನೋಡಿದ್ರೆ, ತಿನ್ಬೇಕು ಅನ್ನೋ ಮನಸ್ಸೇ ಆಗಲ್ಲ. ಇಲ್ಲೊಂದು ರೆಸ್ಟೊರೆಂಟ್ನಲ್ಲೂ ಕೂಡ ಗ್ರಾಹಕರಿಗೆ ಇದೇ ರೀತಿಯ ಅನುಭವವಾಗಿದೆ. ಯುಎಸ್ ನ ಇಂಡಿಯನ್ ಕ್ರೆಪ್ ಕಂ ಎಂಬ ರೆಸ್ಟೊರೆಂಟ್ನಲ್ಲಿ ಭಾರತೀಯ ತಿನಿಸುಗಳಾದ ಸಾದಾ ದೋಸೆ ಮತ್ತು ಮೆದು ವಡೆಯನ್ನು “ನೇಕೆಡ್ ಕ್ರೆಪ್ಸ್” ಮತ್ತು “ಡಂಕ್ಡ್ ಡೋನಟ್ ಡಿಲೈಟ್” ಎಂಬ ವಿಲಕ್ಷಣ ಹೆಸರಿನಿಂದ ಹೆಸರಿಸಲಾಗಿದೆ. ಮೆನುವಿನಲ್ಲಿ “ನೇಕೆಡ್ ಕ್ರೆಪ್ಸ್” ಮತ್ತು “ಡಂಕ್ಡ್ ಡೋನಟ್ ಡಿಲೈಟ್” ಎಂಬ ಹೆಸರು, ಬೆಲೆ ನೋಡಿ ದಂಗಾಗಿದ್ದಾರೆ.
ಇಲ್ಲಿ, “ಸ್ಮಾಶ್ಡ್ ಪೊಟಾಟೊ ಕ್ರೇಪ್” $18.69 (ರೂ. 1,491), “ನೇಕೆಡ್ ಕ್ರೇಪ್” $17.59 (ರೂ. 1,404), “ಡಂಕ್ಡ್ ಡೋನಟ್ ಡಿಲೈಟ್” $16.49 (ರೂ. 1,316) ಮತ್ತು “ಡಂಕ್ಡ್ ರೈಸ್ ಕೇಕ್ ಡಿಲೈಟ್” $15.39 (Rs 1,228) ಗೆ ಮಾರಾಟವಾಗುತ್ತದೆ.
ಪ್ರಭಾವಿತ ದೇಸಿಸ್ ಎಂಬುವವರು ಇಂಡಿಯನ್ ಕ್ರೆಪ್ ಕಂ ಎಂಬ ರೆಸ್ಟೊರೆಂಟ್ ಮೆನು ಮತ್ತು ಬೆಲೆ ದರಗಳ ಸ್ಕ್ರೀನ್ಶಾಟ್ಅನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ. ʻಈ ರೆಸ್ಟೊರೆಂಟ್ ದಕ್ಷಿಣ ಭಾರತೀಯ ಆಹಾರವನ್ನು ಪೂರೈಸುತ್ತದೆ. ಆದರೆ, ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ‘ಕ್ರೇಪ್ಸ್’ ಮತ್ತು ‘ಡೋನಟ್ಸ್’ ಎಂದು ಮರುಬ್ರಾಂಡ್ ಮಾಡುತ್ತಿದೆ. ಖಾದ್ಯಗಳ ವಿಲಕ್ಷಣ ಹೆಸರುಗಳಲ್ಲದೆ, ರೆಸ್ಟೋರೆಂಟ್ಗಳು ಅವುಗಳನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತವೆʼ ಎಂದಿದ್ದಾರೆ.
omfg pic.twitter.com/EEIkpBJcoA
— inika⛓ (@inika__) July 16, 2022
omfg pic.twitter.com/EEIkpBJcoA
— inika⛓ (@inika__) July 16, 2022
ದೇಸಿಸ್, ಈ US ರೆಸ್ಟೋರೆಂಟ್ ಜನಪ್ರಿಯ ಭಕ್ಷ್ಯಗಳನ್ನು ಮರುಹೆಸರಿಸುವುದು ಒಳ್ಳೆಯದು ಎಂದು ಭಾವಿಸಿದ್ದಾರೆ. ಆದಾಗ್ಯೂ, ನೆಟಿಜನ್ಗಳು ಈ ಬಗ್ಗೆ ಸ್ಪಷ್ಟವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.