ಮಡಿಕೇರಿ : ರಾಜ್ಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಈ ನಡುವೆ ಕೊಡಗು ಜಿಲ್ಲೆಯಲ್ಲಿ ಭಾರೀ ಶಬ್ದದೊಂದಿಗೆ ಭೂಕುಸಿತ ಉಂಟಾಗಿರುವ ಘಟನೆ ನಡೆದಿದೆ.
Good News : ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ನಂದಿನಿ ಉತ್ಪನ್ನ’ಗಳ ದರ ಇಳಿಕೆ | Nandini Product Price
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗ ಜನಜೀವನ ಅಸ್ವಸ್ತಗೊಂಡಿದ್ದು, ನಿನ್ನೆ ಭಾರೀ ಶಬ್ದವೊಂದು ಕೇಳಿಸಿದ ನಂತರ ಭೂಕುಸಿತ ಉಂಟಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ.
2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ಸುಮಾರು 5 ಎಕರೆಯಷ್ಟು ಭೂಮಿ ಕೊಚ್ಚಿ ಬಂದಿದೆ. ಭೂಕುಸಿತಕ್ಕೂ ಮೊದಲು ಭಾರೀ ಶಬ್ಧವೊಂದು ಕೇಳಿಬಂದಿದ್ದು, ಜನರು ಭಯಭೀತರಾಗಿದ್ದಾರೆ.