ಬೆಂಗಳೂರು : ಕೆಎಂಎಫ್ ನಿಂದ ನಂದಿನಿ ಉತ್ಪನ್ನಗಳಾದಂತ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರವನ್ನು ಹೆಚ್ಚಿಸಿ ಆದೇಶಿಸಲಾಗಿತ್ತು. ಇದೀಗ ಈ ದರಗಳನ್ನು ಕೊಂಚ ಕಡಿಮೆ ಮಾಡಿದೆ. ಈ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ.
ಈ ಬಗ್ಗೆ ಕರ್ನಾಟಕ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ದಿನಾಂಕ 18-07-2022ರಿಂದ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ ಎಸ್ ಟಿ ವಿಧಿಸಿದ ಕಾರಣ, ಜಿಎಸ್ಟಿ ದರದಂತೆ ಪರಿಷ್ಕೃತ ದರವನ್ನು ಹೊರಡಿಸಲಾಗಿತ್ತು.
ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರವನ್ನು ಹಿಂಪಡೆದು, ಗ್ರಾಹಕರ ಹಿತ ದೃಷ್ಟಿಯಿಂದ ದಿನಾಂಕ 19-07-2022ರಿಂದ ಜಾರಿಗೆ ಬರುವಂತೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರಗಳನ್ನು ಈ ಕೆಳಗಿನಂತೆ ಮರುಪರಿಷ್ಕರಿಸಲಾಗಿದೆ.
ಹೀಗಿದೆ ಪರಿಷ್ಕೃತ ನಂದಿನ ಉತ್ಪನ್ನಗಳ ದರ ಪಟ್ಟಿ