ಮುಂಬೈ : ಇಂದೋರ್-ಅಮಲ್ನೇರ್ಗೆ ತೆರಳುತ್ತಿದ್ದ ಎಸ್ಟಿ ಕಾರ್ಪೊರೇಷನ್ ಬಸ್ನಲ್ಲಿದ್ದ ಎಲ್ಲ 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಿಗ್ಗೆ ಇಂದೋರ್-ಅಮಲ್ನೇರ್ಗೆ ತೆರಳುತ್ತಿದ್ದ ಬಸ್ ಅಪಘಾತದ ಸುದ್ದಿಯಿಂದ ಅನೇಕ ಜನರು ಆಘಾತಕ್ಕೊಳಗಾಗಿದ್ದರು. ಈ ಬಸ್ ಪ್ರಯಾಣಿಕರೊಂದಿಗೆ ಸೇತುವೆಯಿಂದ ಕೆಳಗೆ ಬಿದ್ದಿದ್ದು, ನರ್ಮದಾ ನದಿಯಲ್ಲಿ ಮುಳುಗಿತ್ತು. ನಂತ್ರ ರಕ್ಷಣೆ ಕಾರ್ಯಾಚರಣೆ ನಡೆಸಿದಾದ್ರು, ದುರದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನು ಎಸ್ಟಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ ಈ ಕುರಿತು ಮಾಹಿತಿ ನೀಡಿದ್ದು, “ಖಾಲ್ಘಾಟ್ ಎಸ್ಟಿ ಕಾರ್ಪೊರೇಷನ್ ಅಪಘಾತದಲ್ಲಿ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣವನ್ನ ಕಂಡುಹಿಡಿಯಲು 3 ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಮತ್ತು ಈ ಬಸ್ನಲ್ಲಿರುವ VTS ಅಂದರೆ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ನ ತಾಂತ್ರಿಕ ವಿಶ್ಲೇಷಣೆಯನ್ನ ಮಾಡಲಾಗುತ್ತಿದೆ. ಪ್ರಯಾಣಿಕರು ಬೇರೆ ರಾಜ್ಯದವರಾಗಿದ್ದರೂ ಅವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ನೆರವು ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ” ಎಂದರು.
ಆರಂಭದಲ್ಲಿ ಈ ಬಸ್ನಲ್ಲಿ 40 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿತ್ತು. ಆದರೆ ಅವಘಡ ಸಂಭವಿಸಿದಾಗ ಬಸ್ʼನಲ್ಲಿ 12 ಮಂದಿ ಪ್ರಯಾಣಿಕರಿದ್ದರು ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಸಧ್ಯ ಈ ಅಪಘಾತದಲ್ಲಿ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.