ಚೆನ್ನೈ: ಚೆನ್ನೈನ ಕ್ರೋಮ್ಪೆಟ್ನಲ್ಲಿ 19 ವರ್ಷದ ಯುವಕನೊಬ್ಬ ತಾಂಬರಂ ಸ್ಯಾನಿಟೋರಿಯಂ ಪ್ರದೇಶದಲ್ಲಿ ಹೈಟೆನ್ಷನ್ ವಿದ್ಯುತ್ ಪ್ರಸರಣ ಗೋಪುರದ ಮೇಲೆ ಹತ್ತಿ ಉಪನಗರ ರೈಲು ಸೇವೆಗಳಿಗೆ ಅಡ್ಡಿಪಡಿಸಿದ ಆಘಾತಕಾರಿ ಘಟನೆ ನಡೆದಿದೆ. ತನ್ನ 15 ವರ್ಷದ ಗೆಳತಿಯನ್ನು ತನ್ನನ್ನು ಮದುವೆಯಾಗುವಂತೆ ಮನವೊಲಿಸುವ ಪ್ರಯತ್ನದಲ್ಲಿ ಈ ಕೆಲಸವನ್ನು ಯುವಕ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕೃಷ್ಣ ಎನ್ನುವ ಯುವಕ ಕ್ರೋಮ್ಪೆಟ್ನ ರಾಧಾ ನಗರದಲ್ಲಿ ವಾಸಿಸುತ್ತಿದ್ದಾನೆ. ಅವನು 11 ನೇ ತರಗತಿಯಲ್ಲಿ ಓದುತ್ತಿರುವ ತನ್ನ ಪ್ರದೇಶದ ಹುಡುಗಿಯನ್ನು ಲವ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಇನ್ನೂ ಕೃಷ್ಣ ಮನೆ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಯುವಕನ ಜೊತೆಗೆ ಮಾತುಕತೆ ನಡೆಸಲು ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಇದೇ ವೇಳೆ ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿ ವಿದ್ಯುತ್ ಸ್ಥಗಿತಗೊಳಿಸಿದ್ದು ಎನ್ನಲಾಗಿದೆ. ಪೊಲೀಸರು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿದ ನಂತರವೂ, ಯುವಕ ಕೆಳಗೆ ಇಳಿಯಲು ನಿರಾಕರಿಸಿದನು ಎನ್ನಲಾಗಿದೆ. ನಂತರ ಹುಡುಗಿಯನ್ನು ಸ್ಥಳಕ್ಕೆ ಕರೆದೊಯ್ಯಲಾಯಿತು, ಮತ್ತು ಅವಳು ಅವನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರವೇ ಅವನು ಕೆಳಗಿಳಿದ ಎನ್ನಲಾಗಿದೆ.