ಉತ್ತರಾಖಂಡ: ನದಿಯಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಲು ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ.
ಉತ್ತರಾಖಂಡ ಪೊಲೀಸರು ಟ್ವಿಟರ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಕಾಂಗ್ರಾ ಘಾಟ್ನ ರಾವತ್ಪುರ ಭವನದ ಬಳಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ರಕ್ಷಣೆಗೆ ಮುಂದಾದ ಇಬ್ಬರು ಪೊಲೀಸರನ್ನು ಹೆಡ್ ಕಾನ್ಸ್ಟೆಬಲ್ ಅತುಲ್ ಸಿಂಗ್ ಮತ್ತು ಸನ್ನಿ ಕುಮಾರ್ ಎಂದು ಗುರುತಿಸಲಾಗಿದೆ.
हरिद्वार – रावतपुर भवन, कांगड़ा घाट के पास डूब रहे युवक को देख #UttarakhandPolice के तैराक HC अतुल सिंह व सनी कुमार (जल पुलिस) ने नदी में छलांग लगा दी और युवक को सकुशल बाहर निकाला जिससे उसकी जान बचायी जा सकी। युवक सोनीपत, हरियाणा निवासी है।#UKPoliceHaiSaath #RESCUE @ANINewsUP pic.twitter.com/D94nSNGExH
— Uttarakhand Police (@uttarakhandcops) July 14, 2022
ವಿಡಿಯೋದಲ್ಲಿ, ನದಿಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ಕಂಡ ಪೊಲೀಸರು ಕೂಡಲೇ ನದುಗೆ ಹಾರಿ ವ್ಯಕ್ತಿಯ ಪ್ರಾಣ ಕಾಪಾಡುವುದನ್ನು ನೋಡಬಹುದು.
ಇಂಟರ್ನೆಟ್ ಬಳಕೆದಾರರು ಪೊಲೀಸರ ಸಾಹಸವನ್ನು ಶ್ಲಾಘಿಸಿದ್ದಾರೆ.