ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡ ಗ್ರೆನೇಡ್ ಸೇನಾ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ್ ಅಧಿಕಾರಿ ಇಬ್ಬರನ್ನೂ ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಪೂಂಚ್ನ ಮೆಂಧರ್ ಸೆಕ್ಟರ್ನಲ್ಲಿ ಈ ಘಟನೆ ನಡೆದಾಗ ಸೇನಾ ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎಂದು ಸೇನಾ ಪಿಆರ್ಒ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷನವೇ ಸೇನಾ ಕ್ಯಾಪ್ಟನ್ ಮತ್ತು ನೈಬ್-ಸುಬೇದಾರ್ (ಜೆಸಿಒ) ಅವರನ್ನು ಹೆಲಿಕಾಪ್ಟರ್ನಲ್ಲಿ ಚಿಕಿತ್ಸೆಗಾಗಿ ಉಧಮ್ಪುರಕ್ಕೆ ಕರೆದೊಯ್ಯಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS : ತಮಿಳುನಾಡು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಇಬ್ಬರು ಶಿಕ್ಷಕರ ಬಂಧನ
Shocking news: ತಂದೆ ಕೈಯಿಂದ ಜಾರಿಬಿದ್ದ ಮಗುವನ್ನು ಕಟ್ಟಡದ ಮೇಲ್ಛಾವಣಿಯಿಂದ ಎಸೆದ ಕೋತಿ: 4 ತಿಂಗಳ ಕಂದಮ್ಮ ಸಾವು