ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಸಿರಿವೈಭವ ಪತ್ತಿನ ಸಹಕಾರ ಸಂಘದಿಂದ ಹೂಡಿಕೆದಾರರಿಗೆ ಕೋಟ್ಯಾಂತರ ರೂಗಳನ್ನು ವಂಚನೆ ಮಾಡಿದೆ ಆಂತ ತಿಳಿದು ಬಂದಿದೆ.
ಸಿರಿವೈಭವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗವಲ್ಲಿ, ಪತಿ ರಾಜೇಶ್, ಅಪ್ಪಾಲಾಲ್ ಚಕೋಲಿ, ಹಿರೇಮಠ್ ಮತ್ತು ನಿರ್ದೇಶಕರ ವಿರುದ್ಧ ಹಣ ಹೂಡಿಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಉತ್ತರಹಳ್ಳಿ, ಆರ್.ಆರ್. ನಗರ, ಬಿಳೇಕಳ್ಳಿ, ಬಸವೇಶ್ವರನಗರದ ಶಾಖೆಗಳಲ್ಲಿ ಹೂಡಿಕೆದಾರರಿಗೆ ಮೋಸ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸರು ರಾಜೇಶ್ ಮತ್ತು ನಾಗವಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ.