ಲಖನೌ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ವೇಳೆ ಗಲಭೆ ಸೃಷ್ಟಿಸಲು ಯೋಜಿಸಿದ್ದ ಆರೋಪದ ಮೇಲೆ ಬಿಹಾರ ಪೊಲೀಸರು ಹುಡುಕುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಫೋರ್ಸ್ ನೀಡಿದ ಹೇಳಿಕೆಯ ಪ್ರಕಾರ, ಫುಲ್ವಾರಿ ಷರೀಫ್ನಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ದರ್ಭಾಂಗದ ನಿವಾಸಿ ನೂರುದ್ದೀನ್ ಜಂಗಿ ಅಲಿಯಾಸ್ ಅಡ್ವೊಕೇಟ್ ನೂರುದ್ದೀನ್ ಅವರನ್ನು ಬಂಧಿಸಲು ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕರು ಉತ್ತರ ಪ್ರದೇಶ ಎಟಿಎಸ್ನಿಂದ ಸಹಕಾರ ಕೋರಿದ್ದಾರೆ ಎನ್ನಲಾಗಿದೆ.
ಶನಿವಾರ ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಟ್ರೋ ನಿಲ್ದಾಣದ ಬಳಿ ಎಟಿಎಸ್ ಜಂಗಿಯನ್ನು ಬಂಧಿಸಿದೆ. ಜಂಗಿ ಮತ್ತು ಅವರ ಸಹಚರರು ಬಿಹಾರದಲ್ಲಿ ಪಿಎಂ ಮೋದಿಯವರ ನಿಗದಿತ ರ್ಯಾಲಿಗಳಲ್ಲಿ ಗಲಭೆ ಸೃಷ್ಟಿಸಲು ಯೋಜಿಸಿದ್ದರು. ಆರೋಪಿಯು 2015ರಲ್ಲಿ ಪಿಎಫ್ಐ ದರ್ಭಾಂಗ ಜಿಲ್ಲಾಧ್ಯಕ್ಷರ ಸಂಪರ್ಕಕ್ಕೆ ಬಂದಿದ್ದು, ಅಂದಿನಿಂದಲೂ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಜಂಗಿ ಅವರು 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದರ್ಭಾಂಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಿಚಾರಣೆ ವೇಳೆ ಅವರು ಲಕ್ನೋದಲ್ಲಿ ತಂಗಿದ್ದು, ಪಿಎಫ್ಐ ಸದಸ್ಯರಿಗೆ ಕಾನೂನು ನೆರವು ನೀಡುವುದಾಗಿ ತಿಳಿಸಿದ್ದಾರೆ.
Big news: ಕೇವಲ 18 ತಿಂಗಳಲ್ಲಿ 2 ಬಿಲಿಯನ್ ಕೋವಿಡ್ ಲಸಿಕೆ ವಿತರಿಸಿ ಹೊಸ ದಾಖಲೆ ನಿರ್ಮಿಸಿದ ಭಾರತ!
BIGG NEWS : 40% ಸರ್ಕಾರದ ಮತ್ತೊಬ್ಬ ಸಚಿವರ ವಿರುದ್ಧ ಪ್ರಧಾನಿಗೆ ಮತ್ತೊಂದು ಪತ್ರ : ಕಾಂಗ್ರೆಸ್ ಟ್ವೀಟ್