ಹರಿಯಾಣ: ಶುಕ್ರವಾರ ರಾತ್ರಿ ಮಹೇಂದ್ರಗಢದಲ್ಲಿ ಆಂಬುಲೆನ್ಸ್ಗೆ ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ಒಂದು ವಾರದ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ತಾಯಿ ಮತ್ತು ಚಾಲಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮಹೇಂದ್ರಗಢದಲ್ಲಿ ನಡೆದಿದೆ.
ನಾರ್ನಾಲ್ನ ಪವನ್ ಸೈನಿ ಪೊಲೀಸರಿಗೆ ನೀಡಿದ ದೂರಿನಲ್ಲಿ, “ತನ್ನ ಪತ್ನಿ ರಶ್ಮಿಯನ್ನು ರೋಹ್ಟಕ್ನ ಪಿಜಿಐಎಂಎಸ್ಗೆ ದಾಖಲಿಸಲಾಗಿತ್ತು. ಅಲ್ಲಿ ಅವಳು ಜುಲೈ 10 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನಾವು ನಾರ್ನಾಲ್ಗೆ ಹಿಂತಿರುಗುತ್ತಿದ್ದಾಗ ಆಂಬುಲೆನ್ಸ್ಗೆ ಬೊಲೆರೋ ಡಿಕ್ಕಿ ಹೊಡೆದಿದೆ. ಈ ವೇಳೆ ನನ್ನ ಪತ್ನಿ ರಶ್ಮಿ ಮತ್ತು ಚಾಲಕ ಸಂದೀಪ್ ಮೃತಪಟ್ಟರು. ನಾನು, ನನ್ನ ತಾಯಿ ಮತ್ತು ನನ್ನ ಮಗಳು ಗಾಯಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಪೊಲೀಸರು ಬೊಲೆರೋ ಡೈವರ್ನ ಮೇಲೆ ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
BREAKING NEWS : ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ಪೊಲೀಸರಿಂದ ನಟೋರಿಯಸ್ ರೌಡಿಶೀಟರ್ ಮೇಲೆ ಫೈರಿಂಗ್!