ಹುಬ್ಬಳ್ಳಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಡಿ 18 ಲಕ್ಷ ಮನೆಗಳ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿನ ಪ್ರವಾಹಕ್ಕೆ ಸಿಲುಕುವ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ವಿವಿಧ ಯೋಜನೆಗಳಲ್ಲಿ ಮನೆಗಳ ನಿರ್ಮಾಣ ಕೈಗೊಂಡಿದೆ. ಹಿಂದಿನ ಸರ್ಕಾರದ ತಾಂತ್ರಿಕ ತಪ್ಪಿನಿಂದ 18 ಲಕ್ಷ ಮನೆಗಳ ಮಂಜೂರಾತಿ ನಿಂತುಹೋಗಿತ್ತು. ಈಗ ಅವುಗಳನ್ನು ಸರಿಪಡಿಸಿ ಅಪ್ ಲೋಡ್ ಮಾಡಲಾಗಿದೆ. ಸರ್ಕಾರದಿಂದ ಸಮಾನ ಮೊತ್ತವನ್ನು ನೀಡಲಾಗುವುದು ಎಂದರು.
ಬೀದರ್, ಬೆಳಗಾವಿ, ರಾಯಚೂರು ಜಿಲ್ಲೆಗಳಿಂದ ವರದಿಗಳನ್ನು ತರಿಸಿಕೊಂಡಿದ್ದು ಕೆಲವು ಆದೇಶಗಳನ್ನು ತರಿಸಿಕೊಳ್ಳಲಾಗಿದೆ. ಕೆಲವು ಆದೇಶಗಳನ್ನು ಸಹ ನೀಡಲಾಗಿದೆ. ನದಿ ಪಾತ್ರಗಳಲ್ಲಿ ನೀರು ಹೆಚ್ಚಾಗಿ ಹರಿಯುವ ಸಂಭವಿದ್ದೆಡೆಗಳಲ್ಲಿ ವಿಶೇಷವಾಗಿ ಬೀದರ್ ಮತ್ತು ಮಹಾರಾಷ್ಟ್ರ ರಾಜ್ಯ ದಿಂದ ಜಲಾಶಯಗಳ ನೀರು ಹೊರಬಿಡುವ ಬಗ್ಗೆ ಅಲ್ಲಿನ ಅಧಿಕಾರಿಗಳ ಸಂಪರ್ಕವಿರಬೇಕು. ನೀರಿನ ಹರಿವಿನ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡು ಇಲ್ಲಿ ಸ್ಥಳಾಂತರ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದೆ. ಒಂದು ವ್ಯವಸ್ಥೆ ಸೃಜಿಸಬೇಕೆಂದು ಸೂಚಿಸಿದ್ದಾರೆ.