ಚೆನ್ನೈ (ತಮಿಳುನಾಡು): 44ನೇ ಫಿಡೆ ಚೆಸ್ ಒಲಿಂಪಿಯಾಡ್ ಜುಲೈ 28ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಆರಂಭವಾಗಲಿದೆ. ಇದೀಗ ನಗರದ ನೇಪಿಯರ್ ಬ್ರಿಡ್ಜ್ನಿಂದ ಚೆಸ್ ಬೋರ್ಡ್ನಂತೆ ಬಣ್ಣ ಬಳಿದಿರುವ ವಿಡಿಯೋ ಇಂಟರ್ ನೆಟ್ನಲ್ಲಿ ವೈರಲ್ ಆಗ್ತಿದೆ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡ ವಿಡಿಯೋದಲ್ಲಿ, ನೇಪಿಯರ್ ಬ್ರಿಡ್ಜ್ ಚೆಸ್ ಬೋರ್ಡ್ನಂತೇ ಚಿತ್ರಿಸುವುದನ್ನು ನೋಡಬಹುದು. ವಿಡಿಯೋದ ಶೀರ್ಷಿಕೆಯಲ್ಲಿ “ಭಾರತದ ಚೆಸ್ ರಾಜಧಾನಿ ಚೆನ್ನೈ, ಗ್ರ್ಯಾಂಡ್ ಚೆಸ್ ಒಲಿಂಪಿಯಾಡ್ 2022 ಅನ್ನು ಆಯೋಜಿಸಲು ಸಿದ್ಧವಾಗಿದೆ. ಐಕಾನಿಕ್ ನೇಪಿಯರ್ ಸೇತುವೆಯನ್ನು ಚೆಸ್ ಬೋರ್ಡ್ನಂತೆ ಅಲಂಕರಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ.
Chennai the Chess Capital of India is all set to host the grand, Chess Olympiad 2022.The iconic Napier Bridge is decked up like a Chess Board.Check it out 😊 #ChessOlympiad2022 #ChessOlympiad #Chennai pic.twitter.com/wEsUfGHMlU
— Supriya Sahu IAS (@supriyasahuias) July 16, 2022
ಈ ವಿಡಿಯೋಗೆ ಟ್ವಿಟರ್ನಲ್ಲಿ ನೆಟ್ಟಿಗರು ಹಲವಾರು ರೀತಿಯಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲೊಬ್ಬರು,”ಅನಿಮೇಟೆಡ್ ಜಗತ್ತಿನಲ್ಲಿ ಓಡುತ್ತಿರುವಂತೆ ತೋರುತ್ತಿದೆ,” ಎಂದು ಕಾಮೆಂಟ್ ಮಾಡಿದ್ದಾರೆ.