ಕೆಎನ್ಎನ್ಡಿಜಿಟಲ್ ಡೆಸ್ಕ್ : ಚಂದ್ರನ ಮೇಲೆ ಈ ಬಾರಿ ಬುಲೆಟ್ ಟ್ರೈನ್ ಇಳಿಸಲಿದ್ದೇವೆ ಎನ್ನುವ ಜಪಾನ್ ಘೋಷಣೆ ಸಧ್ಯ ಸಂಚಲನವನ್ನ ಸೃಷ್ಟಿಸಿದ್ದು, ವಿದೇಶಗಳ ದೃಷ್ಟಿ ಜಪಾನ್ ಮೇಲೆ ನೆಟ್ಟಿದೆ.
ಅದ್ರಂತೆ, ಜಪಾನ್ನ ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ಈ ಘೋಷಣೆ ಮಾಡಿದ್ದು, “ಜಪಾನ್ ಕೃತಕ ಬಾಹ್ಯಾಕಾಶ ಆವಾಸಸ್ಥಾನ (artificial space habitat) ಮತ್ತು ಭೂಮಿ, ಚಂದ್ರ ಮತ್ತು ಮಂಗಳ ಗ್ರಹಗಳನ್ನ ಸಂಪರ್ಕಿಸುವ ಅಂತರ್-ಗ್ರಹ ರೈಲುಗಳನ್ನ ನಿರ್ಮಿಸುವುದಾಗಿ” ತಿಳಿಸಿದ್ದಾರೆ.
ಇನ್ನು ಕಳೆದ ವಾರ ಭೂಮಿಯ ಗುರುತ್ವಾಕರ್ಷಣೆ, ಭೂಪ್ರದೇಶ ಮತ್ತು ವಾತಾವರಣವನ್ನ ಮರುಸೃಷ್ಠಿಸುವ ‘ಗ್ಲಾಸ್’ ಎಂಬ ಆವಾಸಸ್ಥಾನದ ರಚನೆಯನ್ನ ಅಭಿವೃದ್ಧಿಪಡಿಸುವ ಯೋಜನೆಗಳನ್ನ ಸಂಶೋಧಕರು ಘೋಷಿಸಿದ್ರು. ಅದ್ರಂತೆ, ಇದು ಶೂನ್ಯ ಮತ್ತು ಕಡಿಮೆ ಗುರುತ್ವಾಕರ್ಷಣೆಯಲ್ಲಿ ಮಾನವ ಮಸ್ಕ್ಯುಲೋಸ್ಕೆಲಿಟಲ್ ವ್ಯವಸ್ಥೆಯಿಂದಾಗುವ ದುರ್ಬಲತೆಯನ್ನ ತಡೆಯಲಿದೆ.