ಕೊಡುಗು : ರಾಜ್ಯದಲ್ಲಿ ಕಳೆದ 10 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಕೊಡಗಿನಲ್ಲಿ ಮಹಾ ಮಳೆಗೆ ಮೊದಲ ಬಲಿ ಸಂಭವಿಸಿದ್ದು, ಜುಲೈ 5ರಂದು ಗೋಡೆ ಕುಸಿದು ಗಾಯಗೊಂಡಿದ್ದ ವೃದ್ಧೆ ಇಂದು ಸಾವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ಪೇಟೆ ತಾಲೂಕಿನ ಸುಳುಗಳಲೆ ಗ್ರಾಮದ ವಸಂತಮ್ಮ ಮೃತಪಟ್ಟ ವೃದ್ಧೆ. ಜುಲೈ 5ರಂದು ಭಾರೀ ಮಳೆಯ ಆರ್ಭಟಕ್ಕೆ ಮನೆಯ ಗೋಡೆ ಕುಸಿದು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.