ಹಾವೇರಿ : ಧಾರಾಕಾರ ಮಳೆಗೆ ಜಿಲ್ಲೆಯ ರಟ್ಟೀಹಳ್ಳಿಯ ಮಾಸೂರು ಗ್ರಾಮದ ರೈತ ಕುಟುಂಬವೂ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಹುಚ್ಚು ಸಾಹಸ ಮೆರೆದ ಘಟನೆ ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಮಾಸೂರು ಗ್ರಾಮದ ಬಳಿಯಿರುವ ನದಿಯಲ್ಲಿ ಎದೆಯೆತ್ತರ ನೀರು ನಿಂತಿತ್ತು. ಈ ಪ್ರವಾಹದಲ್ಲೇ ಜೀವದ ಹಂಗು ತೊರೆದು ರೈತರ ಕುಟುಂಬದ 8 ಜನರು ಎತ್ತಿನ ಗಾಡಿಯಲ್ಲಿ ತನ್ನ ತೋಟಕ್ಕೆ ಹೋಗುವ ಸಂಚಾರ ಮಾಡುವ ಹುಚ್ಚು ಸಾಹಸ ಮಾಡಿದ್ದಾರೆ. ಎತ್ತಿನ ಎದುರು ವ್ಯಕ್ತಿಯೋಬ್ಬ ದುಸ್ಸಾಹಸ ಮೆರೆದಿದ್ದಾರೆ. ಸ್ವಲ್ಪ ಯಾಮಾರಿದ್ರೂ 8 ಮಂದಿಯೂ ನದಿಯ ಪಾಲಗ್ತಿದ್ರೂ. ತಪ್ಪಿದ ಭಾರೀ ಅನಾಹುತವಾಗಿದೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.