ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರೀತಿ ಯಾವಾಗ ಮತ್ತು ಯಾರ ಮೇಲೆ ಹುಟ್ಟುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಕೆಲವರು ಪ್ರೀತಿಯನ್ನ ತಮ್ಮ ಅಗತ್ಯಗಳಿಗಾಗಿ ಬಳಸ್ತಾರೆ, ಪ್ರೇಮ ಪ್ರಕರಣದ ನೆಪದಲ್ಲಿ ಕಳ್ಳರ ವೇಷ ಹಾಕುತ್ತಾರೆ. ಇನ್ನು ಕೆಲವರು ತಮ್ಮ ಪ್ರೀತಿಯನ್ನ ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಮುಂದಾಗುತ್ತಾರೆ. ಆದ್ರೆ, ಮುಂಬೈನಲ್ಲೊಂದು ವಿಚಿತ್ರ ಲವ್ ಸ್ಟೋರಿ ವರದಿಯಾಗಿದೆ.
ಅಂದ್ಹಾಗೆ, ಮುಂಬೈನ 21 ವರ್ಷದ ಯುವತಿಯೊಬ್ಬಳು ವರ್ಷಗಳಿಂದ ಯುವಕನೊಂದಿಗೆ ಡೇಟಿಂಗ್ ಮಾಡುತ್ತಿದ್ಲು. ಆದ್ರೆ, ಒಂದು ದಿನ ಯುವಕ ಯುವತಿಗೆ ಬಲವಂತ ಮಾಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದು ಯುವತಿಯ ಮನೆಯವ್ರಿಗೂ ಗೊತ್ತಾಗಿ, ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಂತ್ರ ಯುವಕನನ್ನ ಪೊಲೀಸರು ಬಂಧಿಸಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾನೆ. ಅಂದಿನಿಂದ, ಯುವತಿ ಮತ್ತೆ ಯುವಕನನ್ನ ಭೇಟಿಯಾಗಲು ಪ್ರಯತ್ನಿಸಿದ್ರೂ, ಯುವಕ ಹಿಂಜರಿದಿದ್ದಾನೆ.
ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿದ ಯುವತಿ, ಯುವಕನ ಬೈಕ್ ಕದಿಯಲು ಯೋಜಿಸಿ, ಇದಕ್ಕಾಗಿ ಮತ್ತೊಬ್ಬ ಯುವಕನ ಸಹಾಯ ಪಡೆದಳು. ಅದ್ರಂತೆ, ನಕಲಿ ಕೀಲಿ ಸೃಷ್ಟಿಸಿ, ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನ ಬೈಕ್ ಕದ್ದಿದ್ದಾಳೆ. ನಂತ್ರ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.
ಯುವತಿ ತನ್ನ ಮಾಜಿ ಪ್ರಿಯಕರನಿಗೆ ಮತ್ತೊಬ್ಬ ಸ್ನೇಹಿತನಿಂದ ಸಂದೇಶ ಕಳುಹಿಸಿ, ಅವಳ ಹತ್ತಿರ ಮಾತನಾಡಿದ್ರೆ ಬೈಕ್ ಎಲ್ಲಿದೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾಳೆ. ಆಗ ಯುವಕ ಪೊಲೀಸರಿಗೆ ಆಕೆಯ ಮೇಲೆ ಅನುಮಾನವಿದೆ ಎಂದು ಹೇಳಿದ್ದಾನೆ. ಯುವತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇನ್ನು ಪೊಲೀಸರು ಯುವತಿಯನ್ನ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.