ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಂಧ್ರಲ್ಲೊಂದು ಅಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಐನಾತಿಯೊಬ್ಬ ಕೇವಲ ದುಡ್ಡಿಗಾಗಿ ಏಳು ಮಹಿಳೆಯರನ್ನ ವಿವಾಹವಾಗಿ ಮೋಸಗೊಳಿಸಿ, ಮತ್ತೆ 8ನೇ ಸಜ್ಜಾದ ಸಂಗತಿ ಬೆಳಕಿಗೆ ಬಂದಿದೆ.
ಆ ಐನಾತಿ ವ್ಯಕ್ತಿ ಹೆಸರು ಅಡಪ ಶಿವಶಂಕರ್ ಬಾಬು ಅಂತಾ.. ಶ್ರೀಮಂತ ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡ ಈತ, ಮಹಿಳೆಯರಿಗೆ ಹೊಸ ಜೀವನ ನೀಡುವುದಾಗಿ ನಂಬಿಸಿ ಮದುವೆಯಾಗಿದ್ದಾನೆ. ನಂತ್ರ ಅಪಾರ ಮೊತ್ತದ ಹಣದೊಂದಿಗೆ ಓಡಿ ಹೋಗೋದನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ಅದ್ರಂತೆ, ಇಲ್ಲಿಯವರಿಗೆ ಈತ 7 ಮಹಿಳೆಯರನ್ನ ವಂಚಿಸಿದ್ದು, ಇನ್ನೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿದ್ದಾನೆ.
ಸಧ್ಯ ಮೋಸಹೋದ ಮಹಿಳೆಯರು ಶಿವಶಂಕರ್ ವಿರುದ್ಧ ಸಿಡಿದೆದಿದ್ದು, ಪೊಲೀಸರ ಮೊರೆಯೋಗಿದ್ದಾರೆ. ಇನ್ನು ಈ ಐನಾತಿ ಶಿವಶಂಕರ್ ಆಂಧ್ರಪ್ರದೇಶದ ಸಚಿವ ಅಂಬಾಟಿ ರಾಮಬಾಬು ಅವರೊಂದಿಗೆ ಸಂಬಂಧ ಹೊಂದಿದ್ದು, ಬಿಜೆಪಿ ನಾಯಕ ಶ್ರೀಕಾಂತ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾನೆ ಎಂದು ಹೇಳಿದ್ದಾರೆ. ಇನ್ನು ಮೋಸಗಾರನ ವಿರುದ್ಧ ಕಠಿಣವಾಗಿ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದರು.
ಅಚ್ಚರಿಯೆಂದ್ರೆ, ಈ ಶಿವಶಂಕರ್ ಮೂವರು ಮಹಿಳೆಯರೊಂದಿಗೆ ಒಂದೇ ನೆರೆಹೊರೆಯ ಮೂರು ವಿಭಿನ್ನ ಬೀದಿಗಳಲ್ಲಿ ವಾಸಿಸುತ್ತಿದ್ದನು. ಕಾಲ ಕಳೆದಂತೆ ಈ ಸಂಗತಿ ಬಯಲಾಗಿದ್ದು, ಮೂವರು ಮಹಿಳೆಯರು ಸೇರಿ ಆತನನ್ನ ಪ್ರಶ್ನಿಸಿದಾಗ ಓಡಿಹೋದನು ಎನ್ನಲಾಗ್ತಿದೆ. ಇನ್ನು ಅವನ ವೈಯಕ್ತಿಕ ಇತಿಹಾಸದ ಹೆಚ್ಚಿನ ತನಿಖೆಯು ನಡೆಸಿದಾಗ ಒಟ್ಟು ಏಳು ವಿಭಿನ್ನ ಮಹಿಳೆಯರನ್ನ ಮದುವೆಯಾಗಿದ್ದಾನೆ ಅನ್ನೋದು ಬಯಲಾಗಿದೆ. ಅಂದ್ಹಾಗೆ, ಆತ 2018ರಲ್ಲಿ ತನ್ನ ಊರಿನಲ್ಲಿಯೇ ಮೊದಲ ವಿವಾಹವಾಗಿದ್ದು, ನಂತ್ರ ಸರಣಿ ಮುಂದುವರೆಸಿದ್ದಾನೆ.
ಅಚ್ಚರಿಯೆಂದ್ರೆ, ಬಲಿಪಶುಗಳಲ್ಲಿ ಹೆಚ್ಚಿನವರು ಹೈದರಾಬಾದ್ನಲಿದ್ದು, ಉನ್ನತ ಶಿಕ್ಷಣ ಪಡೆದು ದುಡಿಯುವ ವರ್ಗದವರು. ತೆಲಂಗಾಣದ ಹೈದರಾಬಾದ್ನ ಸೋಮಜಿಗುಡದಲ್ಲಿರುವ ಪ್ರೆಸ್ಕ್ಲಬ್ನಲ್ಲಿ ಶಿವಶಂಕರ್ ಮೋಸಕ್ಕೆ ಬಲಿಯಾದ ಇಬ್ಬರು, “ಅವನಿಂದ ಮಹಿಳೆಯರನ್ನ ರಕ್ಷಿಸುವ ಸಲುವಾಗಿ ಅವನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ವಿನಂತಿಸಿದರು”.