ಬೆಂಗಳೂರು : ಸರ್ಕಾರಿ ಕಚೇರಿಯಲ್ಲಿಇನ್ಮೇಲೆ ಖಾಸಗಿ ವ್ಯಕ್ತಿಗಳಿಗೆ ಮೊಬೈಲ್ ನಿಷೇಧ ಮಾಡಲಾಗಿದೆ. ಮೊಬೈಲ್ನಲ್ಲಿ ಫೋಟೊ ವಿಡಿಯೋ ಬಳಸುವಂತಿಲ್ಲ. ಖಾಸಗಿ ವ್ಯಕ್ತಿಗಳು ಮೊಬೈಲ್ ನಿಷೇಧಿಸುವಂತೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ತಾವು ಮಾಡುವ ಕೆಲಸ ಎಲ್ಲೂ ಹೊರ ಹೋಗುವ ಭಯ ಶುರುವಾಗಿದ್ದು. ಯಾವುದೇ ಒಬ್ಬ ವ್ಯಕ್ತಿ ಸರ್ಕಾರಿ ಕೆಲಸ ಆಗಬೇಕೆಂದ್ರ ಅಲ್ಲಿ ಮನವಿ ಮಾಡಿಕೊಳ್ಳಬೇಕಾಗಿದೆ. ಯಾವಾಗ ಅಲ್ಲಿ ಅಧಿಕಾರಿಗಳು ಹಣವನ್ನು ಕೇಳಲು ಶುರು ಮಾಡುತ್ತಾರೆ ಆಗ ಖಾಸಗಿ ವ್ಯಕ್ತಿಗಳು ತನ್ನ ಮೊಬೈಲ್ನಲ್ಲಿ ವಿಡಿಯೋ, ಅಡಿಯೋ, ಪೋಟೋಗಳನ್ನು ತೆಗೆದುಕೊಂಡು ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಮಾಡುತ್ತಿರುವ ಹೆಚ್ಚಾಗಿ ಕಾಣಸಿಗುತ್ತದೆ. ಈ ಬೆನ್ನಲ್ಲೇ ಕಡಿವಾಣ ಹಾಕೋದಕ್ಕೆ ಸರ್ಕಾರಿ ಕಚೇರಿಯಲ್ಲಿಇನ್ಮೇಲೆ ಖಾಸಗಿ ವ್ಯಕ್ತಿಗಳಿಗೆ ಮೊಬೈಲ್ ಬಳಕೆ ನಿರ್ಬಧಿಸಲು ಸರ್ಕಾರದಿಂದ ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ.