ನವದೆಹಲಿ: ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್ ಪ್ರದೇಶದ ರೆಸ್ಟೋರೆಂಟ್ನಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಕನ್ನಾಟ್ ಪ್ಲೇಸ್ನ ಹೊರ ವಲಯದಲ್ಲಿರುವ ಹೈ ಫೈ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಿಗ್ಗೆ 5.32 ಕ್ಕೆ ಮಾಹಿತಿ ಬಂದಿತು.
#WATCH | It is reported that the fire occurred in a piece of furniture in the restaurant 'Cafe High5' on the first floor. No casualty reported. pic.twitter.com/rMV3NyTuqW
— ANI (@ANI) July 15, 2022
ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಳಿಗ್ಗೆ 6.35 ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು, ಇದುವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅವರು ಹೇಳಿದರು.