ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 16 ರಂದು ಜಿಲ್ಲೆಯ ಶಿಗ್ಗಾಂವ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
BIGG NEWS : `BPL’ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ಶೀಘ್ರವೇ ರಾಗಿ, ಜೋಳ ವಿತರಣೆ ಸ್ಥಗಿತ!
ಅಂದು ಮಧ್ಯಾಹ್ನ 12-30ಕ್ಕೆ ಹುಬ್ಬಳ್ಳಿಯಿಂದ ಹೊರಟು 1-30ಕ್ಕೆ ಶಿಗ್ಗಾಂವ ತಾಲೂಕು ಖುರ್ಸಾಪುರಕ್ಕೆ ಆಗಮಿಸಿ, ಲೋಕೋಪಯೋಗಿ ಇಲಾಖೆಯಿಂದ ಆಯೋಜಿಸಲಾದ ಎನ್.ಎಚ್-4 ಕಲ್ಯಾಣ ರಸ್ತೆ ಅಗಲೀಕರಣ ಹಾಗೂ ಸುಧಾರಣಾ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸವರು. ನಂತರ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಲಾದ ಟೆಕ್ಸ್ಟೈಲ್ ಪಾರ್ಕ್ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಟೆಕ್ಸ್ ಪೋರ್ಟ್ ಸಿದ್ಧ ಉಡುಪು ಘಟಕದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು.
BIGG NEWS : ಆಹಾರ ಧಾನ್ಯಗಳ ಮೇಲೆ ಶೇ.5 ರಷ್ಟು ಜಿಎಸ್ ಟಿ ಹೇರಿಕೆ : ಇಂದು ರಾಜ್ಯಾದ್ಯಂತ ಅಕ್ಕಿಗಿರಣಿ ಬಂದ್
ಮಧ್ಯಾಹ್ನ 3-30 ಗಂಟೆಗೆ ಶಿಗ್ಗಾಂವ ತಾಲೂಕು ಕಲ್ಯಾಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾದ ಕೋಲ್ಡ್ ಸ್ಟೋರೇಜ್ ನೂತನ ಗೋದಾಮು ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. ಸಂಜೆ 4-30ಕ್ಕೆ ಶಿಗ್ಗಾಂವ ಎ.ಪಿ.ಎಂ.ಸಿ. ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ ಸಮಗ್ರ ಕೃಷಿ ಪದ್ಧತಿಗಳ ಶ್ರೇಷ್ಠತಾ ಕೇಂದ್ರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಪಶು ಆಸ್ಪತ್ರೆ ನೂತನ ಕಟ್ಟಡ ಉದ್ಘಾಟಿಸವರು. ಸಂಜೆ 6ಕ್ಕೆಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರೆಂದು ಪ್ರಕಟಣೆ ತಿಳಿಸಿದೆ.
PSI ನೇಮಕಾತಿ ಹಗರಣ: ಎಡಿಜಿಪಿಯ ಮೊಬೈಲ್ ಫೋನ್ನಿಂದ ಇವರುಗಳ ಹೆಸರು ಬಹಿರಂಗ ಸಾಧ್ಯತೆ: ಮೂಲಗಳು