ಬೆಂಗಳೂರು : ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವಾರ್ಡ್ ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
BIG NEWS: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ‘ಬೂಸ್ಟರ್ ಲಸಿಕೆ’
ಬಿಬಿಎಂಪಿಯ 24 ವಾರ್ಡ್ ಗಳ ಹೆಸರು ಬದಲಾವಣೆ, ವಾರ್ಡ್ ವೊಂದಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡುವುದರೊಂದಿಗೆ ಬಿಬಿಎಂಪಿಯ ವಾರ್ಡ್ ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ.
243 ವಾರ್ಡ್ ಗಳ ಮರು ವಿಂಗಡಣೆ ವರದಿಗೆ ಸಲ್ಲಿಕೆಯಾದ 3,833 ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪತ್ರದ ಮೂಲಕ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.