ಕೆಎನ್ಎನ್ಡಿಜಿಟಲ್ ಡೆಸ್ಕ್ : ಥಿಯೇಟರ್ ಎಂದಾಕ್ಷಣ ನೆನಪಿಗೆ ಬರುವುದು ಪಾಪ್ ಕಾರ್ನ್.. ನಮ್ಮಲ್ಲಿ ಹೆಚ್ಚಿನವರು ಸಿನಿಮಾ ನೋಡಲು ಥಿಯೇಟರ್ಗಳಿಗೆ ಹೋದಾಗ ಪಾಪ್ಕಾರ್ನ್ ಮಾತ್ರ ತಿನ್ನುವವರಿದ್ದಾರೆ. ಆದ್ರೆ, ವಾಸ್ತವವಾಗಿ ಪಾಪ್ ಕಾರ್ನ್ ಯಾವಾಗ ಬೇಕಾದ್ರೂ, ಎಲ್ಲಿ ಬೇಕಾದರೂ ತಿನ್ನಬಹುದು. ಅಸಲಿಗೆ ಪಾಪ್ಕಾರ್ನ್ನಲ್ಲಿರುವ ಔಷಧೀಯ ಗುಣಗಳು ಮತ್ತು ಪೋಷಕಾಂಶಗಳು ವಿವಿಧ ಆರೋಗ್ಯ ಸಮಸ್ಯೆಗಳನ್ನ ತೊಡೆದುಹಾಕಲು ನಮಗೆ ಸಹಾಯ ಮಾಡುತ್ತದೆ. ಪಾಪ್ ಕಾರ್ನ್ ಫೈಬರ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ ಕಾಂಪ್ಲೆಕ್ಸ್, ಮ್ಯಾಂಗನೀಸ್, ಮೆಗ್ನೀಸಿಯಮ್ ಹೊಂದಿರುತ್ತೆ. ಇನ್ನೀದು ಸಂಸ್ಕರಿಸದ 100 ಪ್ರತಿಶತ ನೈಸರ್ಗಿಕ ಧಾನ್ಯವಾಗಿದೆ. ಹಾಗಾದ್ರೆ, ಆಗಾಗ ಪಾಪ್ ಕಾರ್ನ್ ತಿನ್ನುವುದರಿಂದ ಆಗುವ ಲಾಭಗಳೇನು? ಮುಂದಿದೆ ಪ್ರಯೋಜನಗಳ ಪಟ್ಟಿ.
* ಪಾಪ್ ಕಾರ್ನ್ʼನಲ್ಲಿ ನಾರಿನಂಶ ಅಧಿಕವಾಗಿದೆ. ಆದ್ದರಿಂದ, ಪಾಪ್ ಕಾರ್ನ್ ತಿನ್ನುವುದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನ ಸುಧಾರಿಸುತ್ತದೆ. ಅಲ್ಲದೇ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತೆ.
* ಪಾಪ್ಕಾರ್ನ್ನಲ್ಲಿರುವ ಪ್ರೋಟೀನ್ ನಮಗೆ ಶಕ್ತಿಯನ್ನ ನೀಡುತ್ತೆ, ದಿನವಿಡೀ ಚೈತನ್ಯ ಮತ್ತು ಉತ್ಸಾಹದಿಂದ ಇರಲು ಪಾಪ್ ಕಾರ್ನ್ ತಿನ್ನಬೇಕು.
* ಪಾಪ್ ಕಾರ್ನ್ ಪಾಲಿಫಿನಾಲ್ ಎಂಬ ಆ್ಯಂಟಿಆಕ್ಸಿಡೆಂಟ್ʼಗಳನ್ನು ಹೊಂದಿರುತ್ತದೆ. ಇವು ಕ್ಯಾನ್ಸರ್ ಬರುವ ಸಾಧ್ಯತೆಯನ್ನ ಕಡಿಮೆ ಮಾಡುತ್ತೆ. ಇನ್ನೀದು ಹೃದಯವನ್ನ ಆರೋಗ್ಯವಾಗಿರಿಸುತ್ತದೆ.
* ಪಾಪ್ ಕಾರ್ನ್ ತಿನ್ನುವುದರಿಂದ ಹೆಚ್ಚು ಕ್ಯಾಲೋರಿಗಳು ಸೇರಿಕೊಳ್ಳುವ ಭಯವಿಲ್ಲ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇವು ಉತ್ತಮ ಆಹಾರ. ಯಾಕಂದ್ರೆ, ಕಡಿಮೆ ಪಾಪ್ಕಾರ್ನ್ ತಿನ್ನುವುದರಿಂದ ಹೆಚ್ಚು ಸಮಯದವರೆಗೆ ಹಸಿವಿನ ಭಾವನೆಯನ್ನು ತಡೆಯಬಹುದು. ಪರಿಣಾಮವಾಗಿ, ಕಡಿಮೆ ಆಹಾರವನ್ನ ಸೇವಿಸ್ಬೋದು, ಫಲಿತಾಂಶವು ತೂಕ ನಷ್ಟವಾಗುತ್ತೆ.
* ಪಾಪ್ ಕಾರ್ನ್ ಫೈಬರ್ ಹೊಂದಿರುತ್ತದೆ. ಇದು ರಕ್ತನಾಳಗಳು ಮತ್ತು ಅಪಧಮನಿಗಳ ಗೋಡೆಗಳ ಮೇಲೆ ಸಂಗ್ರಹವಾದ ಹೆಚ್ಚುವರಿ ಕೊಲೆಸ್ಟ್ರಾಲ್ ತೆಗೆದು ಹಾಕುತ್ತದೆ.
* ಅವುಗಳಲ್ಲಿರುವ ಫೈಬರ್ ರಕ್ತದಲ್ಲಿ ಬಿಡುಗಡೆಯಾಗುವ ಇನ್ಸುಲಿನ್ ಮಟ್ಟವನ್ನ ನಿಯಂತ್ರಿಸುತ್ತದೆ.
* ವಯಸ್ಸಿನ ಕಲೆಗಳು ಮತ್ತು ನಸುಕಂದು ಮಚ್ಚೆಗಳು, ಮ್ಯಾಕ್ಯುಲರ್ ಡಿಜೆನರೇಶನ್ ಕುರುಡುತನ, ಸ್ನಾಯು ದೌರ್ಬಲ್ಯ ಮತ್ತು ಕೂದಲು ಉದುರುವಿಕೆಯಂತಹ ವಯಸ್ಸಿಗೆ ಸಂಬಂಧಿಸಿದ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುತ್ತದೆ.
* ಮ್ಯಾಂಗನೀಸ್ ನಮ್ಮ ಮೂಳೆಗಳನ್ನ ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಅಸ್ಥಿಸಂಧಿವಾತದಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
* ಪೆನ್ಸಿಲ್ವೇನಿಯಾದ ಸ್ಕ್ರಾಂಟನ್ ವಿಶ್ವವಿದ್ಯಾಲಯದ ಸಂಶೋಧಕರು ಪಾಪ್ಕಾರ್ನ್ನಲ್ಲಿರುವ ಆಂಟಿಆಕ್ಸಿಡೆಂಟ್ ಪಾಲಿಫಿನಾಲ್, ಸಾಮಾನ್ಯ ಶೀತವನ್ನ ಸುಲಭವಾಗಿ ಕಡಿಮೆ ಮಾಡುತ್ತದೆ ಅನ್ನೋದನ್ನ ಕಂಡುಕೊಂಡಿದ್ದಾರೆ.