ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಯ ನಂತರ ಮಾಲ್ಡೀವ್ಸ್ ರಾಜಧಾನಿ ಮಾಲೆ ಪರಾರಿಯಾಗಿದ್ದ ಅಧ್ಯಕ್ಷ ಗೊಟಾಬಯ ರಾಜಪಕ್ಸ ಇಂದು ಸಿಂಗಾಪುರಕ್ಕೆ ಹಾರಿದ್ದಾರೆ ಎಂದು ವರದಿಯಾಗಿದೆ.
ರಾಜಪಕ್ಸ ಅವರು ಮಾಲ್ಡೀವ್ಸ್ ತೊರೆದು ಖಾಸಗಿ ಜೆಟ್ನಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ರಾಜಪಕ್ಸ ಅವರು ದ್ವೀಪ ದೇಶದಿಂದ ಸಿಂಗಾಪುರಕ್ಕೆ ತೆರಳಲು ಖಾಸಗಿ ಜೆಟ್ ಮಾಲೆಗೆ ಬಂದಿಳಿದಿತ್ತು ಎಂದು ವರದಿಯಾಗಿದೆ.
ರಾಜಪಕ್ಸ, ಅವರ ಪತ್ನಿ ಐಯೋಮಾ ರಾಜಪಕ್ಸ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ನಿನ್ನೆ ರಾತ್ರಿ ಮಾಲೆಯಿಂದ ಸಿಂಗಾಪುರಕ್ಕೆ ಸಿಂಗಾಪುರ್ ಏರ್ಲೈನ್ಸ್ ವಿಮಾನವನ್ನು ಹತ್ತಲು ನಿರ್ಧರಿಸಿದ್ದರು. ಆದರೆ, ಭದ್ರತಾ ಕಾರಣಗಳಿಂದ ನಿಗದಿತ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಜುಲೈ 9 ರಂದು ಗೊಟಾಬಯ ರಾಜಪಕ್ಸ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದ ನಂತರ ಅವರು ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದರು.