ಮಡಿಕೇರಿ : ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ “ಗ್ರಾಮ ಒನ್” ಮೂಲಕ ಹಳ್ಳಿಗರಿಗೂ ಸೇವೆ ನೀಡಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ 92 ಗ್ರಾಮ ಪಂಚಾಯತ್ಗಳಲ್ಲಿ “ಗ್ರಾಮ ಒನ್” ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದ್ದು, ಉಳಿದ 18 ಗ್ರಾಮ ಪಂಚಾಯತ್ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಬಿಸಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
BREAKING NEWS: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅಪಘಾತ; ಪ್ರಾಣ ಅಪಾಯದಿಂದ ಪ್ರಯಾಣಿಕರು ಪಾರು
ಆ ದಿಸೆಯಲ್ಲಿ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ, ಕರಿಕೆ, ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ, ತೋಳೂರು ಶೆಟ್ಟಳ್ಳಿ, ಬೆಟ್ಟದಳ್ಳಿ, ಕುಶಾಲನಗರ ತಾಲ್ಲೂಕಿನ ಗರ್ವಾಲೆ, ಕೆದಕಲ್, ಹರದೂರು, ತೊರೆನುರು, ನಾಲ್ಕೂರು ಶಿರಂಗಾಲ, ವಿರಾಜಪೇಟೆಯ ಅಮ್ಮತ್ತಿ, ಪೊನ್ನಂಪೇಟೆಯ ನಿಟ್ಟೂರು, ಬಲ್ಯಮಂಡೂರು, ಕೆ.ಬಾಡಗ, ಪೊನ್ನಪ್ಪಸಂತೆ, ಬಿ.ಶೆಟ್ಟಿಗೇರಿ, ಕಿರುಗೂರು ಹಾಗೂ ನಾಲ್ಕೇರಿ ಈ 18 ಗ್ರಾಮ ಪಂಚಾಯತ್ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ “ಗ್ರಾಮ ಒನ್” ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಪ್ರಾಂಚೈಸಿಗಳು https://www.karnatakaone.gov.in/Public/GramOneFranchiseeTerms ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಿಯಾಂಕ ಕೆ.ಎಸ್., ಜಿಲ್ಲಾ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿ ಅವರ ಕಚೇರಿ ಮೊಬೈಲ್ ಸಂಖ್ಯೆ +91 8861682120/ 08272-223500 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.