ಹಾವೇರಿ : ಗೊಬ್ಬರ ಮಾರಾಟಗಾರರು ಅಧಿಕ ಲಾಭದ ದೃಷ್ಟಿಯಿಂದ ರೈತರಿಗೆ ಲಿಂಕ್ ಆಧಾರದಲ್ಲಿ ಯೂರಿಯಾ ಗೊಬ್ಬರದ ಜೊತೆ ಜಿಂಕ್ ಸೇರಿ ಯಾವುದೇ ಇತರ ಗೊಬ್ಬರವನ್ನು ಲಿಂಕ್ ಮಾಡಿ ವಿತರಿಸುವಂತಿಲ್ಲ. ವಿತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
BIGG NEWS : ಶೀಘ್ರವೇ ರಾಜ್ಯದ 1,500 ಮಾದರಿ ಸರ್ಕಾರಿ ಶಾಲೆ ಅಭಿವೃದ್ಧಿ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಅಭಾವ ಉಂಟಾಗಿಲ್ಲ. ಇನ್ನೂ ಮೂರು ದಿನಗಳಲ್ಲಿ ಜಿಲ್ಲೆಗೆ ಮದ್ರಾಸ್ ಫರ್ಟಿಲೈಜರ್ ಲಿಮಿಟೆಡ್ ನಿಂದ 700ಟನ್,ನ್ಯಾಷನಲ್ ಫರ್ಟಿಲೈಜರ್ ನಿಂದ 1,900 ಟನ್, ಇಫ್ಕೋದಿಂದ 1,300ಟನ್, ಸ್ಪಿಕ್ನಿಂದ 1,250ಟನ್ ಸೇರಿದಂತೆ ಇತರ ಮೂಲಗಳಿಂದ ಜುಲೈ 14ರಂದು ಒಟ್ಟು 7,550 ಟನ್ ಯೂರಿಯಾ ಗೊಬ್ಬರ ಜಿಲ್ಲೆಗೆ ಸರಬರಾಜು ಆಗಲಿದೆ. ಅರ್ಧ ಲೀಟರ್ ದ್ರವರೂಪದ ಪರಿಸರ ಸ್ನೇಹಿ “ನ್ಯಾನೋ ಯೂರಿಯಾ” ಒಂದು ಚೀಲ ಯೂರಿಯಾ ಗೊಬ್ಬರಕ್ಕೆ ಸಮ. ರೈತರಿಗೆ ಅದು ಕೇವಲ 250 ರೂಪಾಯಿಗಳಿಗೆ ದೊರೆಯುತ್ತದೆ. ರೈತರು ಯೂರಿಯಾ ಬಳಕೆ ಕಡಿಮೆ ಮಾಡಿ ಭೂಮಿಯ ಫಲವತ್ತತೆಯನ್ನು ಉಳಿಸಬೇಕು ಎಂದರು.