ನವದೆಹಲಿ : ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಅವ್ರನ್ನ ತರಾಟೆಗೆ ತೆಗೆದುಕೊಂಡಿದೆ.
ಕುಮಾರ್ ಹೇಳಿಕೆಯನ್ನು ಟೀಕಿಸಿದ ಕೇಸರಿ ಪಕ್ಷ, “ಭಾರತದ ಮೊದಲ ಮಹಿಳಾ ಬುಡಕಟ್ಟು ಅಧ್ಯಕ್ಷ ಅಭ್ಯರ್ಥಿಯನ್ನ ಈ ರೀತಿಯಾಗಿ ಅವಮಾನಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಸಣ್ಣತನವನ್ನ ತೋರಿಸುತ್ತದೆ” ಎಂದು ಜರಿದಿದೆ.
“ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ, ಆದಿವಾಸಿ ಸಮಾಜದ ಮಹಿಳೆ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿ ಎಂದು ಘೋಷಿಸಿದ್ದು, ಇದು ಬುಡಕಟ್ಟು ಜನರನ್ನ ಗಮನಾರ್ಹವಾಗಿ ಸಬಲೀಕರಣಗೊಳಿಸುವ ಕ್ರಮ. ಆದ್ರೆ, ಕಾಂಗ್ರೆಸ್ ನಾಯಕ ಅವರನ್ನ ಸಹವಾಸದಿಂದ ದುಷ್ಟ ಎಂದು ಕರೆಯುತ್ತಾರೆ! ಯಾಕಂದ್ರೆ, ಮುರ್ಮು ಬುಡಕಟ್ಟು ಜನಾಂಗದವರು. ನಿಜಕ್ಕೂ ಕಾಂಗ್ರೆಸ್ ನಡೆ ನಾಚಿಕೆಗೇಡು’ ಎಂದು ಬಿಜೆಪಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಉಸ್ತುವಾರಿ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೆ, ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಒಬ್ಬ ಸಭ್ಯ ವ್ಯಕ್ತಿ. ಆದ್ರೆ, ಅವ್ರು ಭಾರತದ ಅತ್ಯಂತ ದುಷ್ಟ ತತ್ವಶಾಸ್ತ್ರವನ್ನ ಪ್ರತಿನಿಧಿಸುತ್ತಾರೆ. ದ್ರೌಪದಿ ಮುರ್ಮು ಅವರನ್ನ ಆದಿವಾಸಿಗಳ ಸಂಕೇತವನ್ನಾಗಿ ಮಾಡಬಾರದು” ಎನ್ನುವ ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಹೇಳಿಕೆ ಸಧ್ಯ ವಿವಾದವನ್ನ ಹುಟ್ಟುಹಾಕಿದೆ.