ನವದೆಹಲಿ : ಕಳೆದ ವರ್ಷ ಡ್ರಗ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಪಡೆದ ನಂತ್ರ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್ಸಿಬಿಯಿಂದ ತಮ್ಮ ಪಾಸ್ಪೋರ್ಟ್ ಹಿಂದಿರುಗಿಸುವಂತೆ ವಿಶೇಷ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬುಧವಾರ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಪಾಸ್ಪೋರ್ಟ್ ಹಿಂತಿರುಗಿಸುವಂತೆ ನ್ಯಾಯಾಲಯದ ನೋಂದಾವಣೆಗೆ ಸೂಚಿಸಿದೆ. ಆರ್ಯನ್ ಖಾನ್ ಅರ್ಜಿಯ ವಿಚಾರಣೆಯನ್ನಇಂದು ನಿಗದಿಪಡಿಸಿದ್ದ ನ್ಯಾಯಾಲಯ, ವಿಚಾರಣೆಯ ನಂತ್ರ ಸ್ಟಾರ್ ಕಿಡ್ ಪರವಾಗಿ ತೀರ್ಪು ನೀಡಿದೆ.
ಅಂದ್ಹಾಗೆ, ಕಳೆದ ವರ್ಷ ಅಕ್ಟೋಬರ್ನಲ್ಲಿ ಮಾದಕ ದ್ರವ್ಯ ಪ್ರಕರಣದಲ್ಲಿ ಆರ್ಯನ್ ಖಾನ್ನನ್ನ ಎನ್ಸಿಬಿ ಬಂಧಿಸಿತ್ತು. ಆದ್ರೆ, ತನಿಖಾ ಸಂಸ್ಥೆ ಪ್ರಕರಣದ ಆರೋಪಪಟ್ಟಿ ಸಲ್ಲಿಸಿದಾಗ ಅದರಲ್ಲಿ ಆರ್ಯನ್ ಖಾನ್ ಹೆಸರು ಇರಲಿಲ್ಲ.
ಅಕ್ಟೋಬರ್ 3ರಂದು ಆರ್ಯನ್ ಬಂಧನ
ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎನ್ಸಿಬಿ ಆರ್ಯನ್ ಮತ್ತು ಇತರ ಐವರನ್ನ ಬಿಡುಗಡೆ ಮಾಡಿದೆ. ಜಾಮೀನಿನ ಷರತ್ತುಗಳ ಪ್ರಕಾರ ಆರ್ಯನ್ ಖಾನ್ ತನ್ನ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕಳೆದ ವರ್ಷ ಅಕ್ಟೋಬರ್ 3 ರಂದು ಮುಂಬೈ ಕರಾವಳಿಯಲ್ಲಿ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ನಂತ್ರ ಆರ್ಯನ್ ಖಾನ್ನನ್ನ ಎನ್ಸಿಬಿ ಬಂಧಿಸಿತ್ತು. ಬಾಂಬೆ ಹೈಕೋರ್ಟ್ನಿಂದ ಜಾಮೀನು ಪಡೆಯುವ ಮೊದಲು ಆರ್ಯನ್ 20 ದಿನಗಳಿಗಿಂತ ಹೆಚ್ಚು ಜೈಲಿನಲ್ಲಿ ಕಳೆದರು.