ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಲ್ಲಿಯವರೆಗೆ ನೀವು ಐಸ್ ಬಕೆಟ್ ಚಾಲೆಂಜ್ ಮತ್ತು ರೈಸ್ ಬಕೆಟ್ ಚಾಲೆಂಜ್ ಬಗ್ಗೆ ಕೇಳಿರಬೇಕು. ಅವರು ಬಾಹುಬಲಿ ಥಾಲಿ ಮತ್ತು ಬಾಹುಬಲಿ ಹಲೀಮ್ ರುಚಿ ನೋಡಿರಬೇಕು. ಆದ್ರೆ, ಸಮೋಸಾ ಚಾಲೆಂಜ್ ಬಗ್ಗೆ ಕೇಳಿದ್ದೀರಾ? ಇದರಲ್ಲಿ ಏನಿದು ಚಾಲೆಂಜ್., ಚಿಟಿಕೆಯಲ್ಲಿ ತಿನ್ನಬಹುದು ಅಂದ್ರಾ? ಅದು ಅಷ್ಟು ಸುಲಭವಲ್ಲ. ಯಾಕಂದ್ರೆ, ಇದು ನಿಮ್ಮ ಅಂಗೈ ಗಾತ್ರದ ಸಮೋಸಾ ಅಲ್ಲ. ಬಾಹುಬಲಿ ಸಮೋಸಾ. ಹೆಸರಿಗೆ ತಕ್ಕಂತೆ ಬೃಹತ್ತಾಗಿದೆ. ಇನ್ನಿದನ್ನ 30 ನಿಮಿಷದಲ್ಲಿ ತಿಂದ್ರೆ, 51 ಸಾವಿರ ಕೊಡುತ್ತೇನೆ ಎಂದು ಆ ಅಂಗಡಿ ಮಾಲೀಕರು ಸವಾಲು ಹಾಕಿದ್ದಾರೆ.
ಮನೆಯಲ್ಲಿ ಮಾಡುವ ನಿತ್ಯದ ತಿನಿಸುಗಳಿಂದ ಬೇಜಾರಾಗಿದ್ದರೆ, ವಾರಾಂತ್ಯದಲ್ಲಿ ಯಾರಾದರೂ ರೆಸ್ಟೋರೆಂಟ್ಗಳಿಗೆ ಹೋಗಿ ಕೆಲವು ವೆರೈಟಿಗಳನ್ನು ಸವಿಯುತ್ತಾರೆ. ಆಯಾ ರೆಸ್ಟೋರೆಂಟ್ʼಗಳ ಮಾಲೀಕರು ಗ್ರಾಹಕರನ್ನು ತಮ್ಮತ್ತ ಸೆಳೆಯಲು ನಾನಾ ಸವಾಲುಗಳನ್ನ ಎಸೆಯುತ್ತಿದ್ದಾರೆ. ಅಂಥದ್ದೇ ಈ ಸಮೋಸಾ ಚಾಲೆಂಜ್. ಉತ್ತರ ಪ್ರದೇಶದ ಮೀರತ್ʼನಲ್ಲಿ ಸಿಹಿ ಅಂಗಡಿ ಮಾಲೀಕರೊಬ್ಬರು ಇಂಥದ್ದೊಂದು ಚಾಲೆಂಜ್ ಎಸೆದಿದ್ದಾರೆ. ಇಲ್ಲಿ ಕಾಣಿಸಿಕೊಂಡಿರುವ ಬಾಹುಬಲಿ ಸಮೋಸವನ್ನ ಕೇವಲ 30 ನಿಮಿಷದಲ್ಲಿ ತಿಂದವರಿಗೆ 51 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಅಂದ್ಹಾಗೆ, ಈ ಬಾಹುಬಲಿ ಸಮೋಸಾದ ತೂಕವೆಷ್ಟು ಗೊತ್ತಾ? ಬರೋಬ್ಬರಿ 8 ಕೆಜಿ. ಇನ್ನು ಚಾಲೆಂಜ್ ಲೆಕ್ಕಾಚಾರದಲ್ಲಿ ಪ್ರತಿ ಐದು ನಿಮಿಷಕ್ಕೆ 1 ಕೆಜಿಗಿಂತ ಹೆಚ್ಚು ಸಮೋಸ ತಿನ್ನಬೇಕು. ಆಗ ಮಾತ್ರ ನೀವು ಅರ್ಧ ಗಂಟೆಯಲ್ಲಿ 8 ಕೆಜಿ ತಿನ್ನಬಹುದು. ಸಾಮಾನ್ಯವಾಗಿ ಸಮೋಸಾ 50 ಗ್ರಾಂ ಅಥವಾ 100 ಗ್ರಾಂ ತೂಕದಲ್ಲಿರುತ್ತದೆ. ಆದರೆ ಬಾಹುಬಲಿ ಸಮೋಸಾ 8 ಕೆಜಿ ತೂಕವಿದೆ. ತಿನ್ನುವ ಧೈರ್ಯ ಯಾರೂ ಮಾಡ್ಬೋದು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಮೀರತ್ನ ಶುಭಂ ಲಾಲ್ಕುರ್ತಿ ಬಜಾರ್ನಲ್ಲಿ ಕೌಶಲ್ ಸ್ವೀಟ್ಸ್ ಎಂಬ ಸಿಹಿತಿಂಡಿ ಅಂಗಡಿ ನಡೆಸುತ್ತಿದ್ದಾರೆ. ಸಿಹಿತಿಂಡಿಗಳು ಮತ್ತು ಸಮೋಸಾಗಳಲ್ಲಿ ಹಲವು ವಿಧಗಳಿವೆ. ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಹೊಸದನ್ನು ಪ್ರಯತ್ನಿಸಲು ಬಯಸುತ್ತಿರುವ ಲಾಲ್ಕುರ್ತಿ ಬಾಹುಬಲಿ ಸಮೋಸಾದೊಂದಿಗೆ ಎಲ್ಲರಿಗೂ ಸವಾಲನ್ನ ಎಸೆಯುತ್ತಿದ್ದಾರೆ. ಈ ಸಮೋಸ ತಯಾರಿಸಲು ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ. ಇನ್ನೀದು ಬಾಹುಬಲಿ ಸಮೋಸಾವು ಪನೀರ್ ಮತ್ತು ಡ್ರೈ ಫ್ರೂಟ್ಸ್ ಜೊತೆಗೆ ಆಲು ಮಸಾಲವನ್ನ ಒಳಗೊಂಡಿದೆ. ಆದ್ದರಿಂದಲೇ ಇದರ ರುಚಿ ಅದ್ಭುತವಾಗಿರುತ್ತೆ. ಆದ್ರೆ, ಇಲ್ಲಿಯವರೆಗೆ ಯಾರೂ ಈ ಸವಾಲನ್ನ ಗೆದ್ದಿಲ್ಲ.