ನವದೆಹಲಿ : ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 18,930 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 18,930 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 35 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 525305ಕ್ಕೆ ಏರಿಕೆಯಾಗಿದೆ.
#COVID19 | ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,930 ಹೊಸ ಪ್ರಕರಣಗಳು, 14,650 ಚೇತರಿಕೆಗಳು ಮತ್ತು 35 ಸಾವುಗಳು ವರದಿಯಾಗಿವೆ.
ಸಕ್ರಿಯ ಪ್ರಕರಣಗಳು 1,19,457
ದೈನಂದಿನ ಪಾಸಿಟಿವಿಟಿ ದರ 4.32%
#COVID19 | India reports 18,930 fresh cases, 14,650 recoveries, and 35 deaths in the last 24 hours.
Active cases 1,19,457
Daily positivity rate 4.32% pic.twitter.com/cAqSEIWR0L— ANI (@ANI) July 7, 2022