ಕೆ ಎನ್ ಎನ್ ನ್ಯೂಸ್ ಡೆಸ್ಕ್: ಇತ್ತೀಚೆಗೆ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಪ್ರತಿನಿತ್ಯ ಹೊಸ ಹೊಸ ವಿಡಿಯೋ ಹಾಕ್ತಾರೆ.
ಅದರಲ್ಲೂ ಇದೀಗ ಮದುವೆ ಸೆಟ್ ಆಯಿತು ಅಂದ್ರೆ ಸಾಕು ಪ್ರಿ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಆಗಿಬಿಟ್ಟಿದೆ. ಅದಕ್ಕಾಗಿ ಸುಂದರತಾಣಗಳನ್ನು ಹುಡುಕುತ್ತಾರೆ. ಆದರೆ ಈ ವೇಳೆ ಅನಿರೀಕ್ಷಿತ ಘಟನೆಗಳು ನಡೆಯುತ್ತದೆ. ಇವುಗಳಲ್ಲಿ ಕೆಲವು ಆಘಾತಕಾರಿಯಾಗಿದ್ದರೆ, ಸಾಕಷ್ಟು ಘಟನೆಗಳು ನಗುವುಕ್ಕಿಸುವಂತಿರುತ್ತವೆ. ಇದೀಗ ಅಂತಹದ್ದೆ ಇನ್ನೊಂದು ವಿಡಿಯೋ ವೈರಲ್ ಆಗಿದೆ. ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಕ್ ದೃಶ್ಯ ಕಂಡುಬಂದಿದೆ. ನೀವು ಒಮ್ಮೆ ನೋಡಿದ್ರೆ ಸಿಕ್ಕಾಪಟ್ಟೆ ನಗುತ್ತೀರಾ?
ಹೌದು ನವದಂಪತಿಗಳು ಫೋಟೋ ಚೆನ್ನಾಗಿ ಬರುವ ಸಲುವಾಗಿ ಕೃತಕ ಮಳೆಯನ್ನೂ ಸುರಿಸಲಾಗುತ್ತದೆ. ಬೀಳುವ ನೀರಿನ ನಡುವೆ ಕೊಡೆ ಹಿಡಿದು ದಂಪತಿ ನಿಂತಿರುವ ಕ್ಷಣವನ್ನು ಸೆರೆಹಿಡಿಯಲಾಗಿದೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
So rain is good luck on your wedding day…give me the monsoon! 😳😂🌧 pic.twitter.com/VPdK0U17CI
— Fred Schultz (@FredSchultz35) June 25, 2022