ಗುಜರಾತ್: ಗುಜರಾತ್ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ನವೀಕರಣಗೊಂಡ ಒಂದು ವಾರದ ನಂತರ ಮುರಿದು ಬಿದ್ದು ನಿನ್ನೆ ಭೀಕರ ದುರಂತವೊಂದು ( Gujarat’s Morbi cable bridge collapse ) ಸಂಭವಿಸಿತ್ತು. ಘಟನೆಯಿಂದಾಗಿ ಸಾವಿನ ಸಂಖ್ಯೆ ಇದೀಗ 91ಕ್ಕೆ ಏರಿಕೆಯಾಗಿದೆ.
ಅಹಮದಾಬಾದ್ನಿಂದ 200 ಕಿಮೀ ದೂರದಲ್ಲಿರುವ ತೂಗು ಸೇತುವೆ ನಿನ್ನೆ ಸಂಜೆ 6.42ಕ್ಕೆ ಕುಸಿದು ಬಿದ್ದಿದ್ದು, ಛಾತ್ ಪೂಜೆಗೆ ಸಂಬಂಧಿಸಿದಂತೆ ಕೆಲವು ಆಚರಣೆಗಳನ್ನು ಮಾಡಲು ಸುಮಾರು 500 ಜನರು ಅದರ ಮೇಲೆ ಜಮಾಯಿಸಿದ್ದ ವೇಳೆ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಮಚ್ಚು ನದಿಯ ನೀರಿನಲ್ಲಿ ಸುಮಾರು 100 ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ. ಸ್ಥಳದಿಂದ ಬಂದ ವೀಡಿಯೊಗಳು ಅನೇಕರು ನೀರಿನಲ್ಲಿ ಮುಳುಗುತ್ತಿರುವುದನ್ನು ತೋರಿಸಿದು, ದಡವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಸ್ಥಳೀಯರು ಹೇಳುತ್ತಾರೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ರಾಜ್ಕೋಟ್ ನ ಬಿಜೆಪಿ ಸಂಸದ ಮೋಹನ್ಭಾಯ್ ಕಲ್ಯಾಣ್ಜಿ ಕುಂದಾರಿಯಾ ( BJP Rajkot MP Mohanbhai Kalyanji Kundariya ) ಅವರು, ಈ ದುರಂತದಲ್ಲಿ 60 ಕ್ಕೂ ಹೆಚ್ಚು ಶವಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ. ಅದರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರು. ಉಳಿದವರನ್ನು ರಕ್ಷಿಸಲಾಗಿದೆ. ಎನ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇದು ತುಂಬಾ ದುಃಖಕರವಾಗಿದೆ ಎಂದು ಹೇಳಿದ್ದಾರೆ.
ಅಂದಹಾಗೇ, ಗುಜರಾತ್ನ ಮೊರ್ಬಿ ಕೇಬಲ್ ಸೇತುವೆ ಮುರಿದು ಬಿದ್ದ ದುರಂತದ ( Morbi cable bridge collapse ) ಕುರಿತಂತೆ ಪ್ರತ್ಯಕ್ಷ ದರ್ಶಿ ಅಮಿತ್ ಪಟೇಲ್ ಹಾಗೂ ಸುಕ್ರಂ ಎಂಬುವರು ಮಾತನಾಡಿ, ದೀಪಾವಳಿ ರಜಾದಿನಗಳು ಮತ್ತು ವಾರಾಂತ್ಯದ ದೃಷ್ಟಿಯಿಂದ ಅನೇಕ ಜನರು ಇಲ್ಲಿಗೆ ಬಂದರು. ಇದು ಪ್ರವಾಸಿ ಸ್ನೇಹಿ ಸ್ಥಳವಾಗಿದೆ. ಸೇತುವೆಯಲ್ಲಿ ಭಾರಿ ಜನಸಂದಣಿಯಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದಿದ್ದಾರೆ.
Whatsapp ಬಳಕೆದಾರರೇ, ಈಗ ನಿಮ್ಗೆ ನೀವೇ ‘ಮೆಸೇಜ್’ ಕಳಿಸಿಕೊಳ್ಬೋದು ; ಹೇಗೆ ಗೊತ್ತಾ? Messages with Yourself
ಗ್ರಾಹಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ ನಿಯಮಗಳು|New Rule From 1st November
Whatsapp ಬಳಕೆದಾರರೇ, ಈಗ ನಿಮ್ಗೆ ನೀವೇ ‘ಮೆಸೇಜ್’ ಕಳಿಸಿಕೊಳ್ಬೋದು ; ಹೇಗೆ ಗೊತ್ತಾ? Messages with Yourself