ಚಾಮರಾಜನಗರ : ಭತ್ತ ಕಟಾವು ಮಾಡುವ ಲಾರಿಯೊಂದು ಬೈಕ್ ಗೆ ಡಿಕ್ಕಿಯಾಗಿ ಮೂವರು ಬೈಕ್ ಸಾವಾರರು ಸಾವನ್ನಪ್ಪಿರು ಘಟನೆಗೆ ಸಬಂಧಿಸಿದಂತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊರ್ವ ಬಾಲಕ ಸಾವನ್ನಪ್ಪಿದ್ದಾನೆ. ಇದೀಗ ಸಾವಿನ ಸಂಖ್ಯೆ 3 ರಿಂದ 4ಕ್ಕೆ ಏರಿದಂತಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಒಂಬತ್ತು ವರ್ಷದ ಬಾಲಕ ಅಭಿ ಸಾವನ್ನಪ್ಪಿದ್ದಾನೆ.ಶವಗಾರದ ಬಳಿ, ಕುಟುಂಬಸ್ಥರ ಆಕರಂದನ ಮುಗಿಲುಮುಟ್ಟಿದೆ.
ಭತ್ತ ಕಟಾವು ಮಾಡುವ ಲಾರಿಯೊಂದು ಬೈಕ್ ಗೆ ಡಿಕ್ಕಿಯಾಗಿ ಮೂವರು ಬೈಕ್ ಸಾವಾರರು ಸಾವನ್ನಪ್ಪಿರು ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿಯಲ್ಲಿ ಅಪಘಾತ ಸಂಭವಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸವಾರರನ್ನು ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಯುವಕರು ಎಂದು ಹೇಳಲಾಗುತ್ತಿದೆ.ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತದ ಕುರಿತಂತೆ ಪ್ರಕರಣ ದಾಖಲಾಗಿದೆ.