ಆಂಧ್ರಪ್ರದೇಶ: ಅಚ್ಯುತಪುರಂ ಜಿಲ್ಲೆಯ ಬ್ರಾಂಡಿಕ್ಸ್ ವಿಶೇಷ ಆರ್ಥಿಕ ವಲಯ (ಎಸ್ಇಝಡ್) ದ ಉಡುಪು ತಯಾರಿಕಾ ಘಟಕದಲ್ಲಿ ಮಂಗಳವಾರದಂದು ಅನಿಲ ಸೋರಿಕೆಯಾದ ಬಳಿಕ 87 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದರೆ ಯಾವುದೇ ಸಾವು-ನೋವುಗಳು ಇನ್ನೂ ವರದಿಯಾಗಿಲ್ಲ. ಸದ್ಯ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯು ಮಾದರಿಗಳನ್ನು ತೆಗೆದುಕೊಂಡಿದೆ, ಪರೀಕ್ಷೆಗಾಗಿ ಸಿಕಂದರಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ) ಗೆ ಕಳುಹಿಸಲಾಗಿದೆ. ಈ ಘಟನೆಯಿಂದ ವಾಂತಿ ಮತ್ತು ವಾಕರಿಕೆಯಿಂದಾಗಿ ಮಹಿಳಾ ಉದ್ಯೋಗಿಗಳು ಪ್ರಜ್ಞೆ ತಪ್ಪಿದರು ಎಂದು ವರದಿಯಾಗಿದೆ.