ಹಾವೇರಿ : ಹಾವೇರಿಯಲ್ಲಿ ನವೆಂಬರ್ 11 ರಂದು ನಿಗದಿಯಾಗಿದ್ದ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ಗೆ ಮುಂದೂಡಲಾಗಿದ್ದು, ಸಮ್ಮೇಳನದ ಹೊಸ ದಿನಾಂಕದ ಕುರಿತು ಇಂದು ಘೋಷಣೆಯಾಗುವ ಸಾಧ್ಯತೆ ಇದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಕನ್ನಡಸಾಹಿತ್ಯ ಪರಿಷತ್ ಮೂಲಗಳು ತಿಳಿಸಿವೆ.
ಹಾವೇರಿಯಲ್ಲಿ ನವೆಂಬರ್ 11 ರಿಂದ 13 ರವರೆಗೆ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿಗದಿಪಡಿಸಲಾಗಿತ್ತು. ಆದರೆ ತಯಾರಿ ಕಾರ್ಯಕ್ಕೆ ಹೆಚ್ಚಿನ ಕಾಲಾವಕಾಶ ಬೇಕಿರುವ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮುಂದೂಡಲಾಗಿದೆ. ಹೊಸದಿನಾಂಕವನ್ನು ಅಕ್ಟೋಬರ್ 12 ರಂದು ಕಾರ್ಯಕಾರಿ ಮಂಡಳಿ ಸಭೆ ಬಳಿಕ ಘೋಷಿಸಲಾಗುತ್ತದೆ.