ತುಮಕೂರು: ಜಿಲ್ಲೆಯಲ್ಲಿ ಇಂದು ಮತದಾರರಿಗೆ ಹಂಚಲು ಸಂಗ್ರಹಿಸಿದ್ದಂತ 80 ಕುಕ್ಕರ್ ಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿರೋದಾಗಿ ತಿಳಿದು ಬಂದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಲ್ಲಿಪಾಳ್ಯದ ವಾರ್ಡ್ ನಂ.22ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮತದಾರರಿಗೆ ಹಂಚೋದಕ್ಕೆ ಕುಕ್ಕರ್ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಚುನಾವಣಾಧಿಕಾರಿಗಳಿಗೆ ಜೆಡಿಎಸ್ ಕಾರ್ಯಕರ್ತರು ನೀಡಿದ್ದರು.
ಈ ಮಾಹಿತಿಯ ಮೇರೆಗೆ ಚುನಾವಣಾಧಿಕಾರಿಗಳು ಕುಣಿಗಲ್ ನ ಮಲ್ಲಿಪಾಳ್ಯದ ಬೆಟ್ಟಸ್ವಾಮಿ ಎಂಬುವರಿಗೆ ಸೇರಿದಂತ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ 80 ಕುಕ್ಕರ್ ಜಪ್ತಿ ಮಾಡಿದ್ದಾರೆ.
ಚುನಾವಣಾಧಿಕಾರಿಗಳು ಜಪ್ತಿ ಮಾಡಿರುವಂತ ಕುಕ್ಕರ್ ಗಳ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಹಾಗೂ ಶಾಸಕ ರಂಗನಾಥ್ ಭಾವಚಿತ್ರ ಇರೋದಾಗಿ ತಿಳಿದು ಬಂದಿದೆ.
BREAKING : ‘ನೀಟ್ ಪಿಜಿ ಪರೀಕ್ಷೆ’ ಮುಂದೂಡಿಕೆ, ಹೊಸ ‘ವೇಳಾಪಟ್ಟಿ’ ಹೀಗಿದೆ! |NEET PG 2024 exam
5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್ ಅನುಮತಿ’ ನೀಡಿಲ್ಲ: ‘ಶಿಕ್ಷಣ ಇಲಾಖೆ’ ಸ್ಪಷ್ಟನೆ