ಬೆಂಗಳೂರು : ಡ್ರಗ್ ಪೆಡಲರ ಒಬ್ಬನನ್ನು ಬಂದಿಸಲು ಸಿಸಿಬಿ ಪೊಲೀಸರು ತೆರಳಿದ್ದ ವೇಳೆ ನೈಜೀರಿಯಾ ಗಳು ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಪೊಲೀಸರು ಅರೆಸೇನಾತು ಕುಡಿಯುವೊಂದಿಗೆ ತೆರಳಿ 8 ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರ ಮೇಲೆ ಹಲ್ಲೆಗೈದಿದ್ದ ನೈಜೀರಿಯಾ ಪ್ರಜೆಗಳನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ರಾಜನಕುಂಟೆ ಬಳಿ 8 ನೈಜೀರಿಯಾ ಪ್ರಜೆಗಳನ್ನು ಈಗ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನೈಜೀರಿಯಾ ಪ್ರಜೆಗಳ ಬಂಧನಕ್ಕೆ ಡಿಸ್ವ್ಯಾಟ್ ಪಡೆಯನ್ನು ಪೊಲೀಸರು ಕರೆದೋಯ್ದಿದ್ದರು.
ಡಿಸ್ಪ್ಯಾಟ್ (ರಾಜ್ಯದ ಅರೆಸೇನಾ ತುಕಡಿ) ಕರೆದೋಯ್ದು ಅವರ ಸಹಾಯದಿಂದ ಬಂಧಿಸಿದ್ದಾರೆ. ರಾಜನಕುಂಟೆ ಬಳಿ ನಿನ್ನೆ ರಾತ್ರಿ ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳು ಹಲ್ಲೆ ಮಾಡಿದರು. ಬಂಧನಕ್ಕೆ ತೆರಳಿದ್ದಾಗ ಹಲ್ಲೆಗೈದು ಪರಾರಿಯಾಗಿದ್ದರು. ಈ ವೇಳೆ ರಾಜ್ಯ ಅರೆಸೇನಾ ಪಡೆಯ ಸಹಾಯದಿಂದ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಪೊಲೀಸರು ಕರೆತಂದಿದ್ದಾರೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.