ಉತ್ತರ ಪ್ರದೇಶ: ಚಾರ್ಜ್ ಹಾಕಿದ್ದ ಮೊಬೈಲ್ ಫೋನ್ನ ಬ್ಯಾಟರಿ ಸ್ಫೋಟಗೊಂಡು ಎಂಟು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಈ ಫೋನ್ ಅನ್ನು ಕೇವಲ ಆರು ತಿಂಗಳ ಹಿಂದೆ ಖರೀದಿಸಲಾಗಿತ್ತು. ಆದ್ರೆ, ಅದರ ಬ್ಯಾಟರಿ ಊದಿಕೊಂಡ ಹಾಗಿತ್ತು. ಅದನ್ನು ಮಗು ಮಲಗಿದ್ದ ಸ್ವಲ್ಪ ಪಕ್ಕದ ಜಾಗದಲ್ಲೇ ಚಾರ್ಜ್ ಹಾಕಲಾಗಿತ್ತು. ಆದ್ರೆ, ಅದು ಸ್ಫೋಟಗೊಂಡಿದೆ.
ಸ್ಫೋಟದ ಸಮಯದಲ್ಲಿ ಮಗುವಿನ ತಾಯಿ ಕುಸುಮ್ ಕಶ್ಯಪ್ ಕೋಣೆಯಲ್ಲಿ ಇರಲಿಲ್ಲ. ಭಾರೀ ದೊಡ್ಡ ಶಬ್ದ ಕೇಳಿ ಬಂದ ಕಾರಣ ತಾಯಿ ಮಗುವಿನ ಬಳಿ ಓಡಿದ್ದಾಳೆ. ಘಟನೆಯಲ್ಲಿ ಮಗುವಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಈ ಬಗ್ಗೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಆದರೆ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ಗ್ರಾಹಕರಿಗೆ ಮತ್ತೊಂದು ಶಾಕ್ : ನಂದಿನಿ ಹಾಲಿನ ಬೆಲೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ಸಭೆಯಲ್ಲಿ ನಿರ್ಧಾರ
ಹೆದ್ದಾರಿಯಲ್ಲಿ ಕಾರೊಂದು ಬೆಂಕಿಗಾಹುತಿ: ಸಂತ್ರಸ್ತರ ಸಹಾಯಕ್ಕೆ ಧಾವಿಸಿದ ಮಹಾ ಸಿಎಂ ಶಿಂಧೆ
ಸಮಾಧಿಯಾದ ಮಗನ ಮೃತದೇಹ ಕೇಳಿದ ತಂದೆಯ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ