ಮುಂಬೈ: ಮುಂಬೈನಲ್ಲಿ ಏಕಾಎಕಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದು ಸೋಂಕಿಗೆ 8 ತಿಂಗಳ ಮಗು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದು ವರ್ಷದ ಮಗು ಸಾವನ್ನಪ್ಪಿದ್ದು ದಡಾರದಿಂದ ಮೃತಪಟ್ಟಿತ್ತು. ಮುಂಬೈನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 233 ಆಗಿದೆ ಎಂದು ನಗರದ ನಾಗರಿಕ ಸಂಸ್ಥೆ ತಿಳಿಸಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ಡಾ ತಾನಾಜಿ ಸಾವಂತ್ ಮಂಗಳವಾರ ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ನಡೆದ ಸಭೆ ನಡೆಸಿದ್ದರು. ಇದರಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು, ಬಿಎಂಸಿ ಅಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಡಾ ಮೀತಾ ವಾಶಿ ಮತ್ತು ಡಾ ಅರುಣ್ ಗಾಯಕ್ವಾಡ್ ಉಪಸ್ಥಿತರಿದ್ದರು.
ಮುಂಬೈ ಅಲ್ಲದೆ, ಜಾರ್ಖಂಡ್ನ ರಾಂಚಿ, ಗುಜರಾತ್ನ ಅಹಮದಾಬಾದ್ ಮತ್ತು ಕೇರಳದ ಮಲಪ್ಪುರಂಗಳಲ್ಲಿ ಮಕ್ಕಳಲ್ಲಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿ ಮಾಡಲಾಗಿದ್ದು, ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ಕಳುಹಿಸಲು ಪ್ರೇರೇಪಿಸಿದೆ ಎಂದು ತಿಳಿದು ಬಂದಿದೆ.
ಅಧಿಕೃತ ಹೇಳಿಕೆಯಲ್ಲಿ, ದಡಾರ ಪ್ರಕರಣಗಳ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತಂಡಗಳು ತನಿಖೆ ನಡೆಸುತ್ತವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Good News: ರಾಜ್ಯದಲ್ಲಿನ 33 ಸಾವಿರ ಸಂಘಗಳಿಗ 5 ಲಕ್ಣ ರೂ ಸಹಾಯಧನ – ಸಿಎಂ ಬೊಮ್ಮಾಯಿ ಘೋಷಣೆ