ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಂತ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಸಂಜಯನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದಂತ ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಒಟ್ಟು 8 ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಲ್ಲಿ ಕ್ಯಾಮರೂನ್ ದೇಶದ ಐವರು, ಸುಡಾನ್ ದೇಶದ ಮೂವರು ಸೇರಿದಂತೆ ಐವರು ಸೇರಿದಂತೆ 8 ವಿದೇಶಿ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿದ್ದರು. ಅವರನ್ನು ಇಂದು ವಶಕ್ಕೆ ಪಡೆಯಾಲಾಗಿದೆ.
ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಈ ವಿದೇಶಿ ಪ್ರಜೆಗಳು ಆಗಮಿಸಿದ್ದರು. ಕಳೆದ ಮೂರು ನಾಲ್ಕು ವರ್ಷಗಳಿಂದ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಲ್ಲೇ ವಾಸಿಸುತ್ತಿದ್ದರು. ಅವರನ್ನು ಬಂಧಿಸಿ ಎಫ್ ಆರ್ ಆರ್ ಓ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಆ ಬಳಿಕ ಅವರ ದೇಶಕ್ಕೆ ವಾಪಾಸ್ ಅವರನ್ನು ಪೊಲೀಸರು ಕಳುಹಿಸಲಿದ್ದಾರೆ.
128 ವರ್ಷಗಳಷ್ಟು ಹಳೆಯದಾದ ರಾಜಮನೆತನದ ಮೆನು ವೈರಲ್: 1897ರಲ್ಲಿ ಮಹಾರಾಜ ಊಟ ಹೇಗಿತ್ತು ಗೊತ್ತಾ?








